ಡಯಾಬಿಟಿಸ್ ರಿವರ್ಸಲ್ ಪುಸ್ತಕ ಲೋಕಾರ್ಪಣೆ, ಎಲ್ಲ ಭಾಷೆಗಳಲ್ಲೂ ಇಂತಹ ಕೃತಿ ಅಗತ್ಯ
ಶಿವಮೊಗ್ಗ | 29 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ
ಡಯಾಬಿಟಿಸ್ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಮಾಹಿತಿ ಒದಗಿಸಿರುವ ಕೃತಿ ಇದಾಗಿದ್ದು, ಡಾ. ಪ್ರೀತಂ ಅವರ ಹೊಸ ಸಾಹಿತ್ಯ ಕೃತಿಯು ಎಲ್ಲ ಭಾಷೆಗಳಿಗೂ ತರ್ಜುಮೆ ಆಗಬೇಕು ಎಂದು ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ನಗರದ ಶುಭಂ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಪ್ರೀತಂ ಡಯಾಬಿಟಿಸ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ವೈದ್ಯ ಡಾ. ಪ್ರೀತಂ ಬಿ. ಬರೆದಿರುವ “ಡಯಾಬಿಟಿಸ್ ರಿವರ್ಸಲ್ – ಸತ್ಯ ಮತ್ತು ಮಿಥ್ಯ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
Click on below this picture, Like & Follow Facebook Page ” Digi Malenadu “
ಲೇಖಕಿ, ವೈದ್ಯೆ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರಿಗೆ ನೀಡುವ ಸಲಹೆಗಳನ್ನು ಬರಹ ರೂಪದಲ್ಲಿ ಮಾಧ್ಯಮದ ಮೂಲಕ ಪ್ರಕಟಿಸುವುದರಿಂದ ಹೆಚ್ಚು ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ವೈದ್ಯ ಪ್ರೀತಂ ಅವರು ಡಯಾಬಿಟಿಸ್ ಕುರಿತು ಅತ್ಯಂತ ಸರಳವಾಗಿ ಪುಸ್ತಕದಲ್ಲಿ ವಿವರಿಸಿದ್ದಾರೆ ಎಂದು ತಿಳಿಸಿದರು.
ಲೇಖಕ, ವೈದ್ಯ ಡಾ. ಪ್ರೀತಂ ಮಾತನಾಡಿ, ಇದು ನನ್ನ ಮೊದಲ ಕೃತಿ ಆಗಿದ್ದು, ವೈದ್ಯ ವೃತ್ತಿ ಕ್ಷೇತ್ರದಲ್ಲಿ ಅನೇಕ ವರ್ಷಗಳ ಅನುಭವ ಇರುವುದರಿಂದ ಇನ್ನಷ್ಟು ಕೃತಿಗಳನ್ನು ಬರೆಯುವ ಆಶಯವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ವೇದಿಕೆಯಲ್ಲಿ ಪ್ರೊ. ಸಿರಾಜ್ ಅಹಮದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೈದ್ಯರು, ಕುಟುಂಬ ವರ್ಗ, ಸ್ನೇಹಿತರು ಪಾಲ್ಗೊಂಡಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/