ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಅಗತ್ಯ

ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಅಗತ್ಯ

ಶಿವಮೊಗ್ಗ | 14 ಮೇ 2024 | ಡಿಜಿ ಮಲೆನಾಡು.ಕಾಂ

ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಒತ್ತು ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ. ಬಿ.ಇ.ರಂಗಸ್ವಾಮಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕರಿಗೆ ಏರ್ಪಡಿಸಿದ್ದ ಸಂಶೋಧನಾ ಪ್ರಕ್ರಿಯೆಗೆ ಆರ್ಥಿಕ ಸಹಕಾರ – ಸಮಗ್ರ ಅರಿವು ಕಾರ್ಯಾಗಾರ ಉದ್ದೇಶಿಸಿ ಆನ್‌ಲೈನ್‌ ಮೂಲಕ ಮಾತನಾಡಿದರು.

ಭಾರತ ಸರ್ಕಾರವು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ನಾವೀನ್ಯಯುತ ಪ್ರಯೋಗಗಳಿಗೆ ಪ್ರೇರಕ ವೇದಿಕೆಗಳನ್ನು ನೀಡುತ್ತಿದೆ. ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಐದು ವರ್ಷದಲ್ಲಿ 1.5 ದಶಲಕ್ಷ ಪ್ರಬಂಧಗಳು ಮಂಡನೆಯಾಗಿವೆ. ಅಂತಹ ನಾವೀನ್ಯ ಯೋಜನೆಗಳು ವಾಣಿಜ್ಯೀಕರಣಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಹೊಸತನದ ಚಿಂತನೆಗಳ ಮೂಲಕ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಆರ್ಥಿಕ ವೃದ್ಧಿಗೆ ಕೊಡುಗೆಗಳನ್ನು ನೀಡಬೇಕು. ಈ ಹಿನ್ನಲೆಯಲ್ಲಿ ವಿದ್ಯಾ ಸಂಸ್ಥೆಗಳಲ್ಲಿ ಪ್ರಯೋಗಾತ್ಮಕ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಕೇಂದ್ರಿಕರಿಸಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಾವು ನಡೆಸುವ ಪ್ರಯೋಗಗಳು ಹಾಗೂ ಆವಿಷ್ಕಾರಗಳು ಪರಿಸರಕ್ಕೆ ಹಾನಿಯಾಗದಂತಿರಬೇಕು. ನಾವೀನ್ಯತೆಯೊಂದಿಗೆ ಆರೋಗ್ಯಕರ ಪರಿಸರವನ್ನು ಮುಂದಿನ ತಲೆಮಾರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಸಂಶೋಧನಾ ಪ್ರಕ್ರಿಯೆಗೆ ಆರ್ಥಿಕ ಸಹಕಾರ ನೀಡುವ ವೇದಿಕೆಗಳು ನಮ್ಮ ಮುಂದಿದೆ. ಅಂತಹ ಸೌಲಭ್ಯಗಳನ್ನು ಪಡೆಯುವಾಗ ನಮ್ಮ ನಾವೀನ್ಯ ಯೋಚನೆಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಬೇಕು. ಸಂಶೋಧನೆಯ ಪ್ರಸ್ತಾವನೆಗಳು ಹೊಸ ಅವಕಾಶಗಳನ್ನು ಸೆಳೆಯುವಂತಿರಬೇಕು. | ಎಸ್.ಎನ್.ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ

Click on below this picture, Like & Follow Facebook Page ” Digi Malenadu “

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ವಿಟಿಯು ಗ್ಲೋಬಲ್ ಕ್ಯಾಂಪಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಬಸವ ಕುಮಾರ್.ಕೆ.ಜಿ., ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಉಜ್ವಲ ರವಿಕುಮಾರ್ ಪ್ರಾರ್ಥಿಸಿದರು. ಡಾ. ಶ್ವೇತ ನಿರೂಪಿಸಿದರು. ವಿಟಿಯು ಮೈಸೂರು ವಿಭಾಗದ 23 ಎಂಜಿನಿಯರಿಂಗ್ ಕಾಲೇಜುಗಳ 110 ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!