ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮೃತಧಾರೆ ಕೇಂದ್ರ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮೃತಧಾರೆ ಕೇಂದ್ರ

ಶಿವಮೊಗ್ಗ | 16 ಮೇ 2024 | ಡಿಜಿ ಮಲೆನಾಡು.ಕಾಂ

ಎಲ್ಲ ಆರೋಗ್ಯವಂತ ತಾಯಂದಿರು ಮಗುವಿಗೆ ಹಾಲುಣಿಸಿ ಹೆಚ್ಚಾದ ಎದೆ ಹಾಲನ್ನು ಮೆಗ್ಗಾನ್‌ ಆಸ್ಪತ್ರೆಯ ಅಮೃತಧಾರೆ ಎದೆಹಾಲು ಸಂಗ್ರಹ ಕೇಂದ್ರಕ್ಕೆ ದಾನ ನೀಡಬಹುದಾಗಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿ.ವಿರೂಪಾಕ್ಷ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ “ಅಮೃತಧಾರೆ”ಯನ್ನು ಉದ್ಘಾಟಿಸಿ ಮಾತನಾಡಿದರು.

ಕೆಲ ತಾಯಂದಿರಲ್ಲಿ ಹಾಲು ಉತ್ಪತ್ತಿಯಾಗದಿದ್ದರೆ, ತೀವ್ರ ನಿಗಾ ಘಟಕದ ಕೇಂದ್ರದಲ್ಲಿ ದಾಖಲಾದ ತಾಯಿಯ ಮಗುವಿಗೆ, ನವಜಾತ ಶಿಶು ಕೇಂದ್ರದಲ್ಲಿದ್ದ ಮಗುವಿಗೆ, ಹೆರಿಗೆ ಸಮಯದಲ್ಲಿ ತಾಯಿ ಮೃತರಾದ ಮಗುವಿಗೆ ಎದೆಹಾಲನ್ನು ಉಪಯೋಗ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಎದೆಹಾಲು ನೀಡುವುದರಿಂದ ನವಜಾತ ಶಿಶುವಿಗೆ ನೀಡುವ ಫಾರ್ಮುಲ ಫೀಡ್ ತಪ್ಪಿಸಬಹುದಾಗಿದೆ. ಇದರಿಂದ ಕರುಳಿನ ಬೇನೆ, ನಂಜು, ಕಣ್ಣಿನ ದೋಷ, ಮಕ್ಕಳಿಗೆ ಆಗುವ ಸಂದರ್ಭ ಹೆಚ್ಚಾಗದಂತೆ ತಡೆಯಲು ಸಾಧ್ಯವಾಗುತ್ತದೆ ಎಂದರು.

ನವಜಾತ ಶಿಶು ಆಸ್ಪತ್ರೆಯಲ್ಲಿ ಇರಬೇಕಾದ ಸಮಯ ಕಡಿಮೆಯಾಗುತ್ತದೆ. ಪೋಷಕರಿಗೆ ಖರ್ಚಿನ ಭಾರ ಕಡಿಮೆಯಾಗುತ್ತದೆ. ಎದೆಹಾಲು ನೀಡುವುದರಿಂದ ಮಗುವಿಗೆ ಪೋಷಕಾಂಶಗಳು, ಮೆದುಳು ಚುರುಕು ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ವೈದ್ಯಕೀಯ ಅಧಿಕ್ಷಕ ಡಾ. ಟಿ.ಡಿ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ, ಮುಖ್ಯಸ್ಥ ಡಾ. ಹಾಲೇಶ್, ಡಾ. ರವೀಂದ್ರ ಪಾಟೀಲ್, ಮಕ್ಕಳ ವಿಭಾಗದ ಮುಖ್ಯಸ್ಥ ಟಿ.ಎಚ್.ಒ ಚಂದ್ರಶೇಖರ್, ನೋಡಲ್ ಆಫೀಸರ್ ಡಾ. ವಸಂತ  ಹಾಗೂ ಅನ್ನಪೂರ್ಣ ಹಾಜರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!