ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶ, ಪೆಸಿಟ್‌ನಲ್ಲಿ ಅಮಾತೆ 2024 ಅಂತರಾಷ್ಟ್ರೀಯ ಸಮ್ಮೇಳನ

ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶ, ಪೆಸಿಟ್‌ನಲ್ಲಿ ಅಮಾತೆ 2024 ಅಂತರಾಷ್ಟ್ರೀಯ ಸಮ್ಮೇಳನ

ಶಿವಮೊಗ್ಗ | 17 ಮೇ 2024 | ಡಿಜಿ ಮಲೆನಾಡು.ಕಾಂ

ಅಂತರಾಷ್ಟ್ರೀಯ ಸಮ್ಮೇಳನಗಳು ಕಂಪ್ಯೂಟರ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಸೇಜ್ ಲರ್ನಿಂಗ್ ಹಾಗೂ ತತ್ಸಂಬಂಧ ಕ್ಷೇತ್ರಗಳಲ್ಲಿ ಜರುಗುತ್ತಿರುವ ಸಂಶೋಧನೆಗಳ ಬಗ್ಗೆ ಅಮೂಲಾಗ್ರ ಮಾಹಿತಿಯನ್ನು ನೀಡುವಲ್ಲಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದು ದಕ್ಷಿಣ ಕೊರಿಯಾದ ಕುನ್ಸನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರೊ. ಡಾ. ಇನ್ – ಹೋ ರಾ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೇಂಟ್‌ ಕಾಲೇಜಿನಲ್ಲಿ ಐಇಇಇ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಮಾತೆ 2024 ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಸಂಶೋಧನಾ ಕ್ಷೇತ್ರದಲ್ಲಿ ಪ್ರಪಂಚದ ವಿವಿಧ ದೇಶಗಳು ನಡೆಸುತ್ತಿರುವ ಅದ್ವಿತೀಯ ಸಂಶೋಧನಾ ವಿಷಯಗಳ ಬಗ್ಗೆ ಈ ರೀತಿ ಸಮ್ಮೇಳನಗಳು ಒಡಮೂಡಿಸುವ ವಿಚಾರಗಳ ಬಗ್ಗೆ ಉತ್ತಮ ವೇದಿಕೆಗಳು ನಿರ್ಮಾಣಗೊಳ್ಳುವಲ್ಲಿ ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಪಿಇಎಸ್ ಟ್ರಸ್ಟ್ ಸಿಒಒ ಬಿ.ಆರ್.ಸುಭಾಷ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಇಂಜಿನಿಯರಿಂಗ್ ಕ್ಷೇತ್ರವು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಂಶೋಧನಾತ್ಮಕ ಕೊಡುಗೆ ನೀಡುತ್ತಿದೆ ಎಂದರು.

ಮೆಡಿಕಲ್ ಕ್ಷೇತ್ರದಲ್ಲಿ ಜನರ ಆರೋಗ್ಯವನ್ನು ಸರ್ವಾಂಗೀಣ ರೀತಿಯಲ್ಲಿ ಸುಧಾರಿಸುವ ಮಟ್ಟಕ್ಕೆ ಹಾಗೂ ಅಸಾಧಾರಣ ಮಟ್ಟದಲ್ಲಿ ತಂತ್ರಜ್ಞಾನಗಳ ಸದ್ಬಳಕೆ, ವಿನಿಯೋಗದ ಬಗ್ಗೆ ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘನೀಯ. ಒಂದು ಕಾಲದಲ್ಲಿ ಗಗನಕುಸುಮವೆಂದು ಬಿಂಬಿತವಾದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು, ಔಷದೋಪಚಾರಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ವರ್ಗದ ಜನಗಳಿಗೂ ತಲುಪಿಸುತ್ತಿರುವುದು ವಿಶ್ವಾಸನೀಯ. | ಬಿ.ಆರ್‌.ಸುಭಾಷ್‌, ಪಿಇಎಸ್‌ ಟ್ರಸ್ಟ್‌ ಸಿಒಒ

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಆರ್‌.ನಾಗರಾಜ್, ಇನ್‌ಫಾರ್ಮೇಷನ್‌ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್‌.ಆರ್‌.ಪ್ರಸನ್ನ ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎನ್‌.ಯುವರಾಜು, ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ. ಲೈಕ್ವಿನ್ ಥಾಮಸ್, ಪಿಇಎಸ್ಐಟಿಎಂ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ, ದೇಶ ವಿದೇಶದ 250ಕ್ಕೂ ಅಧಿಕ ಸಂಶೋಧನಾಕಾಂಕ್ಷಿ ಹಾಗೂ ಬಿಇ, ಎಂ ಟೆಕ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!