ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ ಶಿಕ್ಷಣ ಅಗತ್ಯ, ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳ ನೆನಪಿನ ಅಂಗಳ
ಶಿವಮೊಗ್ಗ | 21 ಮೇ 2024 | ಡಿಜಿ ಮಲೆನಾಡು.ಕಾಂ
ದೇಶದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡಬೇಕು ಎಂದು ಬೆಂಗಳೂರು ಐಐಎಂ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ವೈದ್ಯನಾಥನ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಸಂಘದ ಬೆಂಗಳೂರಿನ ಸಮಿತಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ‘ನೆನಪಿನ ಅಂಗಳ 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಪ್ರಮುಖ ಆರ್ಥಿಕತೆಯ ಪಾಲನ್ನು ಭಾರತ ಮತ್ತು ಚೀನಾ ಹಂಚಿಕೊಂಡಿದೆ. ಇಂತಹ ಬೃಹತ್ ಬೆಳವಣಿಗೆಗೆ ಬಾರತದ ಅದ್ಭುತ ಆರ್ಥಿಕ ಸ್ವರೂಪ ಕಾರಣ. ನಮ್ಮ ಯುವ ಸಮೂಹಕ್ಕೆ ದೇಶದ ಆರ್ಥಿಕ ಸ್ವರೂಪದ ಕುರಿತು ಜ್ಞಾನ ನೀಡಬೇಕು ಎಂದು ತಿಳಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಸಿಸ್ಕೊ ಕಂಪನಿ ಗ್ರಾಹಕ ವಿಭಾಗದ ಉಪಾಧ್ಯಕ್ಷೆ ಪಲ್ಲವಿ ಅರೋರ ಮಾತನಾಡಿ, ಕಾಲೇಜಿನ ಸಾಧನೆ ಮತ್ತು ಹೊರಹೊಮ್ಮುತ್ತಿರುವ ರೀತಿ ಕಂಡು ಸಂತೋಷವಾಗುತ್ತಿದೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಸಿಂಗಾಪುರ್ ಕ್ಸೆರೋಲಾಜಿಕಲ್ ಇಂಟರ್ ನ್ಯಾಷನಲ್ ಕಂಪನಿ ಸ್ಥಾಪಕ ಶ್ರೀರಾಮ ಸುಬ್ಬರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಇದೇ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ನೆನಪಿನ ಅಂಕಣ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಕೆ.ಎಂ.ಬಸಪ್ಪಾಜಿ, ಕಾರ್ಯದರ್ಶಿ ಡಾ. ಎಸ್.ವಿ.ಸತ್ಯನಾರಾಯಣ, ಸಹ ಕಾರ್ಯದರ್ಶಿ ಸರ್ಜಾ ಸತ್ಯೋದಯ, ಎಂ.ಡಿ.ಸುನಿಲ್, ಬೆಂಗಳೂರು ಸಮಿತಿ ಅಧ್ಯಕ್ಷ ಡಾ. ಜಿ.ಆರ್.ಮಂಜುನಾಥ, ಸದಸ್ಯ ಅನಂತಪ್ರಸಾದ್ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/