ಐಐಎಫ್ ದಕ್ಷಿಣ ವಲಯದ ಅಧ್ಯಕ್ಷರಾಗಿ ಶಿವಮೊಗ್ಗದ ಡಿ.ಜಿ.ಬೆನಕಪ್ಪ

ಐಐಎಫ್ ದಕ್ಷಿಣ ವಲಯದ ಅಧ್ಯಕ್ಷರಾಗಿ ಶಿವಮೊಗ್ಗದ ಡಿ.ಜಿ.ಬೆನಕಪ್ಪ

ಶಿವಮೊಗ್ಗ | 23 ಮೇ 2024 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಲ್ನಾಡ್ ಶೈರ್ ಇಕೋ ರೆಸಾರ್ಟ್‌ನಲ್ಲಿ ಮೇ25ರಂದು ಸಂಜೆ 6ಕ್ಕೆ ಐಐಎಫ್ ದಕ್ಷಿಣ ವಲಯದ 2023-24ನೇ ವಾರ್ಷಿಕ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಎಯುಎಂಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಸೌರೆನ್ ಪಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ದಕ್ಷಿಣ ಭಾರತದ 200ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುವರು.

ಐಐಎಫ್ ದಕ್ಷಿಣ ವಲಯದ 2024-25ನೇ ಸಾಲಿನ ಅಧ್ಯಕ್ಷರಾಗಿ ಶಿವಮೊಗ್ಗದ ವಿಜಯ್ ಟೆಕ್ನೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಜಿ.ಬೆನಕಪ್ಪ ನೇಮಕಗೊಳ್ಳಲಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಫೌಂಡ್ರಿ ಉದ್ಯಮದ ಸರ್ವತೋಮುಖ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಿದ್ದಾರೆ.

ಭಾರತ ದೇಶದ ಕೈಗಾರಿಕಾ ಕ್ಷೇತ್ರದ ಉತ್ಪಾದನಾ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಉದ್ಯಮದ ಕೌಶಲ್ಯಾಭಿವೃದ್ಧಿ, ಮಾನವ ಸಂಪನ್ಮೂಲ ಕ್ರೋಢಿಕರಣ, ಸುಧಾರಿತ ಯಾಂತ್ರೀಕರಣ, ಸ್ವಯಂಚಾಲಿತ ತಂತ್ರಜ್ಞಾನ ನವೀಕರಣ, ಕೈಗಾರಿಕೆಗಳಲ್ಲಿ ಹಸರೀಕರಣ, ಯುವ ಉದ್ಯಮಿಗಳು ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಆಂತರ ವಲಯಗಳ ಭೇಟಿ ಹಾಗೂ ವಿಚಾರ ವಿನಿಮಯ, ರಪ್ತು ವ್ಯವಹಾರದ ಬಗ್ಗೆ ತಿಳವಳಿಕೆ, ರಾಜ್ಯ, ಕೇಂದ್ರ ಸರ್ಕಾರಗಳಲ್ಲಿ ಉದ್ಯಮಗಳನ್ನು ಪ್ರತಿನಿಧಿಸುವುದು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿರೂಪಿಸಿ ಕಾರ್ಯಗತಗೊಳಿಸಲು ತಂಡ ಬದ್ದವಾಗಿದೆ.

ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ 1950ರಲ್ಲಿ ಆರಂಭವಾಗಿ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ದೇಶಾದ್ಯಂತ ನೆಲೆಸಿರುವ ಫೌಂಡ್ರಿ ಉದ್ಯಮಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವೃತ್ತಿಪರ ಸಂಸ್ಥೆಯಾಗಿದೆ. ಕೋಲ್ಕತ್ತದಲ್ಲಿ ಪ್ರಧಾನ ಕಚೇರಿ ಇದ್ದು, 3000ಕ್ಕಿಂತ ಹೆಚ್ಚು ನೋಂದಿತ ಸದಸ್ಯ ಬಲವನ್ನು ಹೊಂದಿರುತ್ತದೆ. ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ನಾಲ್ಕು ವಲಯಗಳನ್ನುಹೊಂದಿದೆ. ಅನುಕ್ರಮವಾಗಿ ಕೋಲ್ಕತ್ತ, ಮುಂಬಯಿ, ನವದೆಹಲಿ ಹಾಗೂ ಚೆನೈ ನಗರಗಳಲ್ಲಿ ಕಚೇರಿಗಳನ್ನುಹೊಂದಿರುವ ಸಂಸ್ಥೆ ಈಗ 27 ಶಾಖೆಗಳ ಮೂಲಕ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಐಐಎಫ್ ದಕ್ಷಿಣ ವಲಯವು 2024ರ ಫೆ. 2ರಿಂದ 4 ವರೆಗೆ ಐಐಎಫ್ ರಾಷ್ಟ್ರೀಯ, ಅಂತರಾಷ್ಟ್ರೀಯ ಫೌಂಡ್ರಿ ಪ್ರದರ್ಶನ ಮೇಳವನ್ನು ಬೆಂಗಳೂರಿನ ಬಿಐಇಸಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಐಐಎಫ್ ಶಿವಮೊಗ್ಗ ಶಾಖೆ ಸಹಭಾಗಿತ್ವದಲ್ಲಿ ನೇರವೇರಿಸಿ, ಅದ್ಭುತ ಯಶಸ್ಸು ಹಾಗೂ ಐಐಎಫ್ ಕೀರ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು ಎಂದು ಐಐಎಫ್ ಶಿವಮೊಗ್ಗ ಶಾಖೆ ಗೌರವ ಕಾರ್ಯದರ್ಶಿ ಮಹಾವೀರ ಜೈನ್ ತಿಳಿಸಿದ್ದಾರೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!