ಕೆರೆಗಳ ಸ್ವಚ್ಚಗೊಳಿಸುವ ‘ಸ್ಮಾರ್ಟ್ ಲೇಕ್ ಕ್ಲೀನಿಂಗ್ ಯಂತ್ರ’ದ ವಿನ್ಯಾಸ ಪ್ರಾತ್ಯಕ್ಷಿಕೆ
ಶಿವಮೊಗ್ಗ | 24 ಮೇ 2024 | ಡಿಜಿ ಮಲೆನಾಡು.ಕಾಂ
ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆಯಾಗಿದ್ದು, ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸ್ವಯಂ ಚಾಲಿತ ಯಂತ್ರ ಸ್ವಚ್ಚ ಮಾಡುವ ನಾವೀನ್ಯ ಪರಿಕಲ್ಪನೆಯನ್ನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಾದ ಸಿ.ಅರ್ಜುನ್, ಮೊಹಮದ್ ಸಾಹಿಲ್, ಜಾಗೃತಿ ಬಾಯಿ, ಸುಪ್ರಿತಾ ಪಾಟೀಲ್ ತಂಡವು ಸಹ ಪ್ರಾಧ್ಯಾಪಕಿ ಆಯಿಷಾ ಸಿದ್ದಿಕಾ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ, ಐಓಟಿ ತಂತ್ರಜ್ಞಾನದ ಮೂಲಕ ತ್ಯಾಜ್ಯಗಳನ್ನು ಪತ್ತೆ ಮಾಡಿ ಸ್ವಯಂಚಾಲಿತವಾಗಿ ಕೆರೆಗಳನ್ನು ಸ್ವಚ್ಚಗೊಳಿಸುವ ಯಂತ್ರದ ಪ್ರಾತ್ಯಕ್ಷಿಕೆ ನೋಡುಗರ ಗಮನ ಸೆಳೆಯಿತು.
ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ನಡೆದಾಗ ಕೃತಕ ಬುದ್ದಿಮತ್ತೆ ಮೂಲಕ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ಸಿಸಿ ಕ್ಯಾಮೆರಾ, ಕ್ಷ-ಕಿರಣದಿಂದ ಸ್ವಯಂಚಾಲಿತ ನ್ಯುಮೋನಿಯಾ ಪತ್ತೆ ಹಚ್ಚುವ ತಂತ್ರಜ್ಞಾನ, ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ ನಿರ್ವಹಣೆ, ಎಐ ತಂತ್ರಜ್ಞಾನದ ಮೂಲಕ ಅಂಧರಿಗೆ ಸ್ಮಾರ್ಟ್ ಬುಕ್ ರೀಡರ್, ನವೀನ ಆಟಗಳ ಆಧಾರದ ಮೇಲೆ ಮಾಹಿತಿ ಸುರಕ್ಷಿತಗೊಳಿಸುವ ವ್ಯವಸ್ಥೆ, ಅಕ್ಷನ್ ವೊಕ್ಯಾಲೈಜರ್, ವಿಡಿಯೊ ಸ್ಟೆಗ್ನೊಗ್ರಾಫಿ ಸೇರಿ ಅನೇಕ ನಾವೀನ್ಯ ಯೋಜನೆಗಳು ಪ್ರದರ್ಶನಗೊಂಡವು.
ಲೇಕ್ ಕ್ಲಿನಿಂಗ್ ಸಿಸ್ಟಮ್ (ಪ್ರಥಮ ಬಹುಮಾನ), ವಿದ್ಯಾರ್ಥಿಗಳಾದ ಆರ್.ಎಂ. ಭಾವನಾ, ದತ್ತಾತ್ರಿ ಕೃಷ್ಣ, ಎಸ್.ನಿಸರ್ಗ, ಬಿ.ಪೂಜಾ ತಂಡ ವಿಭಾಗದ ಮುಖ್ಯಸ್ಥ ಜಲೇಶ್ ಕುಮಾರ್ ಮಾರ್ಗದರ್ಶನದಲ್ಲಿ ರೂಪಿಸಿದ ಇಂಟಲಿಜೆಂಟ್ ಸಿಸ್ಟಮ್ ಟು ಸೆಕ್ಯೂರ್ ಇನ್ಫಾರ್ಮೇಶನ್ ಬೆಸ್ಡ್ ಆನ್ ಇನೊವೇಟಿವ್ ಗೇಮ್ಸ್ (ದ್ವಿತೀಯ ಬಹುಮಾನ), ಎಸ್.ಆರ್. ರುಚಿತಾ, ಕೆ.ಸಿರಿ, ಎಸ್.ಆರ್. ಸ್ನೇಹ, ಜಿ.ಎಂ. ವಿಭಾ ತಂಡ ಪ್ರಾಧ್ಯಾಪಕಿ ಕೆ.ಎಂ. ಪೂರ್ಣಿಮಾ ಮಾರ್ಗದರ್ಶನದಲ್ಲಿ ನಿರ್ಮಿಸಿದ ರೇಟಿಂಗ್ ಬೆಸ್ಢ್ ಆನ್ ಯುಟ್ಯೂಬ್ ಕಮೆಂಟ್ಸ್ (ತೃತೀಯ ಬಹುಮಾನ) ಪಡೆದಿದೆ.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಡಿ.ಆರ್.ರಾಘವೇಂದ್ರ, ಭರತ್ ಗುಪ್ತಾ, ಡಾ. ಪಿ.ಮಂಜುನಾಥ, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಜಲೇಶ್ ಕುಮಾರ್, ಡಾ. ಪೂರ್ಣಿಮಾ, ಡಾ. ಗಾನವಿ, ಹಿರಿಯಣ್ಣ, ಪುಷ್ಪ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/