ಮೌಲ್ಯವರ್ಧಿತ ಉತ್ಪನ್ನಗಳ ತರಬೇತಿ, ವಿಶೇಷ ಪ್ರದರ್ಶನ

ಮೌಲ್ಯವರ್ಧಿತ ಉತ್ಪನ್ನಗಳ ತರಬೇತಿ, ವಿಶೇಷ ಪ್ರದರ್ಶನ

ಶಿವಮೊಗ್ಗ | 26 ಮೇ 2024 | ಡಿಜಿ ಮಲೆನಾಡು.ಕಾಂ

ನವುಲೆಯ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 10 ದಿನಗಳ “ಬೇಕರಿ ಹಾಗೂ ಕನ್ಫೆಕ್ಷನರೀಸ್ ಮತ್ತು ಹೈ-ಟೆಕ್‌ಅಣಬೆ ಬೇಸಾಯ” ಕುರಿತ ಉದ್ಯಮಶೀಲತಾ ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿಬಿರಾರ್ಥಿಗಳು ತರಬೇತಿ ನಂತರ ಸ್ವತಃ ತಯಾರಿಸಿದ ಬೇಕರಿ ಉತ್ಪನ್ನ ಮತ್ತು ಅಣಬೆ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ವೀಕ್ಷಿಸಿ ಕುಲಪತಿ ಡಾ. ಆರ್. ಸಿ.ಜಗದೀಶ ಮೆಚ್ಚುಗೆ ವ್ಯಕ್ತಪಡಿಸಿದರು. ವಿಭಿನ್ನಆಹಾರ ಪದಾರ್ಥಗಳನ್ನು ಸವಿದ ಕುಲಪತಿಗಳು ಶಿಬಿರಾರ್ಥಿಗಳನ್ನು ಪ್ರಶಂಸಿದರು.

21 ಶಿಬಿರಾರ್ಥಿಗಳು ವಿವಿಧ ಬಗೆಯ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದ್ದರು. ಗ್ಲುಟೆನ್ ಫ್ರೀಆರೆಂಜ್ ಕಾಫಿಯ ಸಿರಿಧಾನ್ಯ ಕೇಕ್, ಫ್ಯಾಷನ್ ಫ್ರೂಟ್ ಸಿರಿಧಾನ್ಯ ಕೇಕ್, ಔಷಧಿಮುಕ್ತ ಹರ್ಬಲ್‌ರಸ್ಕ್, ಸಿರಿಧಾನ್ಯ ಫಿಜ್ಜಾ, ಅಣಬೆ ಸೂಪ್, ಜ್ಯೂಸ್, ಜಾಮ್‌, ಉಪ್ಪಿನಕಾಯಿ, ಹಪ್ಪಳ ಪ್ರದರ್ಶನದಲ್ಲಿಡಲಾಗಿತ್ತು.

ಡಾ. ದಿನೇಶ್‌ಕುಮಾರ್, ಡಾ. ನಂದೀಶ್, ಡಾ. ಎನ್.ಸುಧಾರಾಣಿ, ಡಾ. ದುಷ್ಯಂತ ಕುಮಾರ್, ಡಾ. ದಿನೇಶ್‌ಕುಮಾರ್, ಡಾ. ಶಿವಕುಮಾರ್, ಡಾ. ತಿಪ್ಪೇಶ್, ಡಾ. ಗಣೇಶ್ ನಾಯ್ಕ, ಡಾ. ಪ್ರದೀಪ್‌, ಡಾ. ಬಿ.ಸಿ.ಹನುಮಂತಸ್ವಾಮಿ, ಡಾ. ಜಿ. ಕೆ. ಗಿರಿಜೇಶ್, ವಿಭಾಗ ಮುಖ್ಯಸ್ಥರು, ವಿಜ್ಞಾನಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!