ಗುಡ್‌ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ

ಗುಡ್‌ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ

ಶಿವಮೊಗ್ಗ | 14 ಆಗಸ್ಟ್‌ 2024 | ಡಿಜಿ ಮಲೆನಾಡು.ಕಾಂ

ಪ್ರಾರಂಭದಿಂದಲೂ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆ ಶ್ಲಾಘನೀಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ನಗರದ ಆಲ್ಕೋಳದ ಗಜಾನನ ಲೇಔಟ್ ನಲ್ಲಿ ನಿರ್ಮಿಸಿರುವ ಗುಡ್‌ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯಿಂದ ನಿರಂತರವಾಗಿ ಸೇವಾ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.

ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಉತ್ತಮ ಸಂಸ್ಕಾರವನ್ನು ಹೊಂದಿ ಬೆಳೆಯುವ ಮಕ್ಕಳು ತಮ್ಮ ತಂದೆ ತಾಯಿಯರನ್ನು ಇಂತಹ ಕೇಂದ್ರಗಳಿಗೆ ತಂದು ಬಿಡದೆ ತಾವೇ ಅವರ ಪೋಷಣೆ ಮಾಡಬೇಕು. ಇಂತಹ ಕೇಂದ್ರಗಳ ಸಂಖ್ಯೆ ಕಡಿಮೆ ಆಗಬೇಕು. ಇಲ್ಲಿ ದಾಖಲಾಗುವವರ ಸಂಖ್ಯೆ ಕಡಿಮೆಯಾಗಲಿ ಎಂದು ತಿಳಿಸಿದರು.

ವಾಗ್ಮಿ ಜಿ.ಎಸ್.ನಟೇಶ್ ಮಾತನಾಡಿ, ನಾವು ದುಡಿಯುವ ನೂರು ರೂಪಾಯಿಯಲ್ಲಿ ಸ್ವಲ್ಪ ಹಣವನ್ನು ಸಮಾಜಸೇವೆಗಾಗಿ ಎತ್ತಿಡಬೇಕು. ಇದರಿಂದ ಪುಣ್ಯದ ಕೆಲಸ ಮಾಡಿದ ಸಾರ್ಥಕ ಭಾವನೆ, ಸಂತೃಪ್ತಿ ನಮಗೆ ದೊರೆಯುತ್ತದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡಕ್ಕೆ ಇನ್ನು ಹೆಚ್ಚಿನ ಸವಲತ್ತುಗಳ ಅವಶ್ಯಕತೆ ಇದ್ದು, ಎಲ್ಲರೂ ಇದಕ್ಕೆ ಒಳ್ಳೆಯ ಮನಸ್ಸಿನಿಂದ ಕೈಜೋಡಿಸಬೇಕು ಎಂದು ತಿಳಿಸಿದರು.

ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರ ನಡೆದು ಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಗುಡ್ ಲಕ್ ಆರೈಕೆ ಕೇಂದ್ರಕ್ಕೆ ವಿವಿಧ ರೂಪದಲ್ಲಿ ದಾನ ನೀಡಿದಂತಹ ದಾನಿಗಳನ್ನು ಸನ್ಮಾನಿಸಲಾಯಿತು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಗುಡ್ ಲಕ್ ಆರೈಕೆ ಕೇಂದ್ರದ ಬೈರಾಪುರದ ಶಿವಪ್ಪಗೌಡ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ಟಿ.ಶ್ರೀನಿವಾಸ್, ಎಂ.ಎ.ಕೃಷ್ಣಪ್ಪ, ಎಚ್.ರಾಮಲಿಂಗಪ್ಪ, ವಸಂತ ಹೋಬಳಿದಾರ್, ಗಜಾನನ  ಗೌಡ, ಜಿ.ವಿಜಯಮಾರ್, ಆನಂದರಾವ್, ಅನುಪಮಾ ಹೆಗಡೆ, ವಿ.ಜಿ.ಲಕ್ಷ್ಮೀನಾರಾಯಣ, ಗಾಯತ್ರಿ ಹೆಗಡೆ, ಜೆ.ಕೆ.ಶರವಣ, ಸರ್ಜಾ ಜಗದೀಶ್, ವಿನಯ್ ಕುಮಾರ್, ಕೆ.ಇ.ಕಾಂತೇಶ್, ನಾರಾಯಣ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!