ಉತ್ತಮ ಉದ್ದೇಶಗಳೊಂದಿಗೆ ಸಂಸ್ಥೆ ಮುನ್ನಡೆಸಿ

ಉತ್ತಮ ಉದ್ದೇಶಗಳೊಂದಿಗೆ ಸಂಸ್ಥೆ ಮುನ್ನಡೆಸಿ

ಶಿವಮೊಗ್ಗ | 20 ಆಗಸ್ಟ್‌ 2024 | ಡಿಜಿ ಮಲೆನಾಡು.ಕಾಂ

ಉತ್ತಮ ಮೌಲ್ಯ, ಧ್ಯೇಯೋದ್ದೇಶದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವುದು ಮುಖ್ಯ ಎಂದು ಸಹ್ಯಾದ್ರಿ ವಾಣಿಜ್ಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಅವಿನಾಶ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಫ್ರೆಂಡ್ಸ್ ಸೆಂಟರ್ ಶಿವಮೊಗ್ಗದ 58ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದಲಾವಣೆಯನ್ನು, ಪರಂಪರೆಯನ್ನು, ನ್ಯೂನತೆಯನ್ನು ತಿದ್ದುವ ಸರಿಪಡಿಸುವ ಪ್ರಯತ್ನವನ್ನು ಇಂತಹ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ ನೂತನ ಕಾರ್ಯಕಾರಿ ಸಮಿತಿಯೊಂದಿಗೆ ಅಧಿಕಾರ ಸ್ವೀಕರಿಸಿ ಮಾತನಾಡಿ, ಸ್ನೇಹದ ಸೇತುವೆ ಕಟ್ಟುವ ಮೂಲಕ ಸೇವೆಯ ಸ್ಪರ್ಶ ಸಂಸ್ಥೆಗೆ ನೀಡುವುದು ನನ್ನ ಉದ್ದೇಶ. ಸಂಸ್ಥೆ ಪ್ರತಿ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಪ್ರಸ್ತಕ ಸಾಲಿನಲ್ಲಿಯೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಂಧ್ಯಾ ಸತ್ಯ ನಾರಾಯಣ ಪ್ರಾರ್ಥಿಸಿದರು. ಎಂ.ಎಂ.ವೆಂಕಟೇಶ ಸ್ವಾಗತಿಸಿದರು. ಫ್ರೆಂಡ್ಸ್ ಸೆಂಟರ್ ಹಾಗೂ ನೇತ್ರ ಭಂಡಾರ ನಡೆದು ಬಂದ ದಾರಿಯನ್ನು ಹಿರಿಯ ಸದಸ್ಯ ನಾಗರಾಜ ವಿವರಿಸಿದರು. ಸತ್ಯ ನಾರಾಯಣ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಲ್ಲಿಕಾರ್ಜುನ ಕಾನೂರ್ ವಾರ್ಷಿಕ ವರದಿ ವಾಚಿಸಿದರು. ಲೋಕೇಶ್ ಅವರು ನೂತನ ಅಧ್ಯಕ್ಷ ಬಿ.ಜಿ.ಧನರಾಜಗೆ ಅಧಿಕಾರ ಹಸ್ತಾಂತರಿಸಿದರು. ಜಿ.ವಿಜಯಕುಮಾರ ನೂತನ ಅಧ್ಯಕ್ಷರ ಪರಿಚಯಿಸಿದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ದಂಪತಿಗಳಿಗೆ ಸನ್ಮಾನಿಸಲಾಯಿತು. 14 ಜನ ನೂತನ ಸದಸ್ಯರು ಸೇರ್ಪಡೆಯಾದರು. ಮಹಿಳಾ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಸುನೀತಾ ಮೋಹನ್ ಅವರು ನೂತನ ಅಧ್ಯಕ್ಷೆ ಸಪ್ನಾ ಬದರಿನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ನೂತನ ಕಾರ್ಯದರ್ಶಿ ರವೀಂದ್ರನಾಥ ಐತಾಳ ವಂದನಾರ್ಪಣೆ ನಡೆಸಿಕೊಟ್ಟರು. ನಿರೂಪಕಿ ರಂಜಿನಿ ದತ್ತಾತ್ತಿ ನಿರೂಪಣೆ ಮಾಡಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!