ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿ ಮುನ್ನಡೆಯಿರಿ

ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿ ಮುನ್ನಡೆಯಿರಿ

ಶಿವಮೊಗ್ಗ | 27 ಡಿಸೆಂಬರ್ 2024 | ಡಿಜಿ ಮಲೆನಾಡು.ಕಾಂ

ವಿಕಸಿತ ಭಾರತದ ಪ್ರಜೆಗಳಾಗಿ ಜಾಗತಿಕವಾಗಿ ಯೋಚಿಸುತ್ತ ಸ್ಥಳೀಯವಾಗಿ  ಯೋಜಿಸಿ ಕಾರ್ಯ ನಿರ್ವಹಿಸಬೇಕು ಎಂದು ಮಂಗಳೂರು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಿಂದ ಅಂಬೇಡ್ಕರ್ ಭವನದಲ್ಲಿ ಅಂತಿಮ ವರ್ಷದ ಫಾರ್ಮಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಪದವಿ ಪ್ರದಾನ ಎಂಬುದು ಬದುಕಿನಲ್ಲಿ ಹೊಸ ದೀಕ್ಷೆ ತೊಡುವ ಸುಸಂದರ್ಭ. ಸ್ವಾರ್ಥದ ಆಲೋಚನೆಗಳಿಗಿಂತ, ನಮ್ಮ ಸಮಾಜದ ಒಳಿತಿನಲ್ಲಿ ನಿಮ್ಮ ಅಭಿವೃದ್ಧಿ ಕಾಣಬೇಕು. ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ತಿಳಿಸಿದರು.

ಪ್ರಕೃತಿಯಲ್ಲಿ ಯಾರು ಮುಖ್ಯ, ಅಮುಖ್ಯರೆಂಬ ಸಂಕೇತ ಇರುವುದಿಲ್ಲ.‌ ಎಲ್ಲ ಕೆಲಸ ಕಾರ್ಯಗಳು, ವ್ಯಕ್ತಿತ್ವಗಳು ತನ್ನದೇ ಮಹತ್ವವನ್ನು ಪಡೆದಿದೆ. ಬೌದ್ಧಿಕ ಬಂಡವಾಳ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರು.‌

ಇಂದು ವಿದೇಶಿಗರು ಭಾರತವನ್ನು ಪೂಜ್ಯನೀಯವಾಗಿ ನೋಡುತ್ತಿದ್ದಾರೆ. ವಿದೇಶಿಗರು ತಮ್ಮ ಮಕ್ಕಳಿಗೆ ಭಾರತೀಯರಂತೆ ಕೌಶಲ್ಯಪೂರ್ಣ ವಿದ್ಯಾವಂತರಾಗಿ ಎಂದು ಉದಾಹರಣೆ ಕೊಡುವ ಮಟ್ಟಕ್ಕೆ ನಮ್ಮ ದೇಶದ ಯುವ ಸಮೂಹ ಬೆಳೆದು ನಿಂತಿದೆ. ಭಾರತದ ಜಿಡಿಪಿ ದರವು ಅತ್ಯಧಿಕವಾಗಿ ಬೆಳೆಯುತ್ತಿದೆ. ಭಾರತ ಅದ್ಭುತ ವಿಕಸನದತ್ತ ಪಯಣಿಸುತ್ತಿದ್ದು, ನಾವೀನ್ಯತೆ ಅವಕಾಶಗಳನ್ನು ಬಳಸಿಕೊಂಡು ಫಾರ್ಮಸಿ ಪದವೀಧರರು ಸಮಾಜಮುಖಿಯಾಗಿ ಹೊರಹೊಮ್ಮಿ ಎಂದು ಹೇಳಿದರು.

ಎನ್ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಜಾಗರೂಕತೆ ವಹಿಸಬೇಕು ಎಂದು ತಿಳಿಸಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಫಾರ್ಮಸಿ ಕ್ಷೇತ್ರದ ಉತ್ಪಾದನಾ ವ್ಯವಸ್ಥೆಯಲ್ಲಿ ಗುಣಮಟ್ಟದ ಭರವಸೆ ಅತ್ಯಂತ ಅವಶ್ಯಕವಾಗಿದೆ. ಇಂದು ತಂತ್ರಜ್ಞಾನವು ಸಮಾಜದಲ್ಲಿ ದೊಡ್ಡ ಪರಿಣಾಮಗಳನ್ನು ಬೀರುತ್ತಿದ್ದು, ಅಂತಹ ತಂತ್ರಜ್ಞಾನದ ಮೂಲಕ ಸಮಾಜದ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಕಾಲೇಜಿನ ಪ್ರಾಚಾರ್ಯ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕಿ ಶಾಂಭವಿ ನಿರೂಪಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಮಹತ್ತರ, ಅಮೃತ್ ನೋನಿ ಅಂಗಸಂಸ್ಥೆಯಿಂದ ಕಟ್ಟಡ ನಿರ್ಮಾಣ

digimalenadu

ಶಿವಮೊಗ್ಗ
error: Content is protected !!