ಶಿವಮೊಗ್ಗದಲ್ಲಿ ಆಕಾಶವಾಣಿ ಧ್ವನಿಮುದ್ರಣ ಘಟಕ ಆರಂಭಕ್ಕೆ ನೆರವು

Shivamogga ಶಿವಮೊಗ್ಗ | 24 ಜನವರಿ 2025 | ಡಿಜಿ ಮಲೆನಾಡು.ಕಾಂ
ಭದ್ರಾವತಿಯಲ್ಲಿ ವ್ಯವಸ್ಥಿತ ಆಕಾಶವಾಣಿ ಕೇಂದ್ರವಿದ್ದು, ಪೂರಕವಾಗಿ ಶಿವಮೊಗ್ಗದಲ್ಲಿ ಉದ್ದೇಶಿತ ಎಫ್.ಎಂ. ರೇಡಿಯೋ ಕೇಂದ್ರದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಧ್ವನಿಮುದ್ರಣ ಘಟಕ ಆರಂಭಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರದಿಂದ ಒದಗಿಸಿದ್ದು, ಅತ್ಯಲ್ಪ ಅವಧಿಯಲ್ಲಿ ಉದ್ಘಾಟಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ನಗರದ ಎಂ.ಆರ್.ಎಸ್.ಸಮೀಪದಲ್ಲಿರುವ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್.ಎಂ.ರೇಡಿಯೋ ಆರಂಭಿಸಲು ಕೆನಡಾದಿಂದ ತರಿಸಲಾಗಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್ ಮೀಟರ್ ಅಳವಡಿಕೆ ಹಾಗೂ ಪೂಜಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳನ್ನು ಜನರ ಆಶೋತ್ತರಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರವು 2024ರಲ್ಲಿ 2,500 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದು, ಮೂಲಸೌಲಭ್ಯಗಳೊಂದಿಗೆ ಅತ್ಯಾಧುನಿಕ ತಂತ್ರಾಂಶಗಳನ್ನು ಅಳವಡಿಸಿದೆ. ಪ್ರಸ್ತುತ ರಾಜ್ಯದ ಕೋಲಾರ, ರಾಣೆಬೆನ್ನೂರು, ಬೀದರ್ ಮತ್ತು ಉಡುಪಿ ಜಿಲ್ಲೆಗಳಿಗೂ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಆಕಾಶವಾಣಿ ಕೇಂದ್ರಗಳು ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಸ್ತುತ ಭದ್ರಾವತಿ ಕೇಂದ್ರದಲ್ಲಿ 1ಕಿ.ವ್ಯಾ. ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಸಲಾಗಿದೆ. ನಗರದ ನೂತನ ಪ್ರಸಾರ ಕೇಂದ್ರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕೆನಡಾದಿಂದ ತರಿಸಿರುವ 10 ಕಿ.ವ್ಯಾ. ಸಾಮರ್ಥ್ಯದ ಟ್ರಾನ್ಸ್ ಮೀಟರ್‌ನ್ನು ಅಳವಡಿಸುತ್ತಿದ್ದು, 100 ಕಿ.ಮೀ. ಪ್ರದೇಶದ ವ್ಯಾಪ್ತಿಯವರೆಗೆ ರೇಡಿಯೋ ಆಲಿಸಬಹುದಾಗಿದೆ ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ್, ಆಕಾಶವಾಣಿ ವಿಭಾಗೀಯ ಮುಖ್ಯಸ್ಥ ಸಂಜೀವ್, ಉಪನಿರ್ದೇಶಕ ಡಾ. ರಘು, ಕಾರ್ಯಕ್ರಮ ಸಂಯೋಜಕ ಸುಬ್ರಾಯಭಟ್, ಆಕಾಶವಾಣಿ ಅಧಿಕಾರಿ,-ಸಿಬ್ಬಂದಿ, ಗಣ್ಯರು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/