ಗಮನ ಸೆಳೆಯುತ್ತಿರುವ ಮಲೆನಾಡ ಕರಕುಶಲ ಉತ್ಸವ, ಕರಕುಶಲ ಕಲಾವಿದರಿಗೆ ಶಾಶ್ವತ ಮಳಿಗೆ ಸ್ಥಾಪಿಸಿದರೆ ಅನುಕೂಲ

ಗಮನ ಸೆಳೆಯುತ್ತಿರುವ ಮಲೆನಾಡ ಕರಕುಶಲ ಉತ್ಸವ, ಕರಕುಶಲ ಕಲಾವಿದರಿಗೆ ಶಾಶ್ವತ ಮಳಿಗೆ ಸ್ಥಾಪಿಸಿದರೆ ಅನುಕೂಲ

Shivamogga ಶಿವಮೊಗ್ಗ | 25 ಜನವರಿ 2025 | ಡಿಜಿ ಮಲೆನಾಡು.ಕಾಂ

ಮಲೆನಾಡ ಕರಕುಶಲ ಉತ್ಸವ ಹಾಗೂ ಫಲಪುಷ್ಪ ಮೇಳಕ್ಕೆ ಮೊದಲ ದಿನ ಸಾವಿರಾರು ಜನರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ಸಾರ್ವಜನಿಕರು, ವಿದ್ಯಾರ್ಥಿಗಳು ಮೇಳದ ಮುಂಭಾಗ ಐ ಲವ್ ಶಿವಮೊಗ್ಗ, ಚಂದ್ರಗುತ್ತಿ ದೇವಾಲಯ ಹಾಗೂ ಕವಿಶೈಲದ ಕಲಾಕೃತಿಗಳ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಉತ್ಸವದಲ್ಲಿ ರೈತರು ಬೆಳೆದ ವಿವಿಧ ಫಲ-ಪುಷ್ಪಗಳು, ಕರಕುಶಲ ಮಳಿಗೆಗಳು, ಕಲ್ಲಿನ ಆಭರಣಗಳು, ಬಟ್ಟೆ ಅಂಗಡಿಗಳು, ತಿನಿಸು ಮಳಿಗೆಗಳು, ಕಲಾ ಚಿತ್ರಗಳು, ಹಸೆ ಚಿತ್ತಾರ, ಮಣ್ಣಿನ ಅಲಂಕಾರಿಕ ಮಳಿಗೆ, ಮರದ ಉತ್ಪನ್ನಗಳು, ಖಾದಿ ಉಡುಪುಗಳು ಸೇರಿ 30 ಕ್ಕೂ ಹೆಚ್ಚು ಮಳಿಗೆ ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಕರಕುಶಲ ಕಲಾವಿದರಿಗೆ ಶಾಶ್ವತ ಮಳಿಗೆ ಸ್ಥಾಪಿಸಿದರೆ ಅನುಕೂಲ: ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಸೃಷ್ಟಿಯಾಗಿದ್ದು, ಕರಕುಶಲ ಕಲಾವಿದರಿಗೆ ಶಾಶ್ವತ ಮಾರುಕಟ್ಟೆ ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ, ತೊಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಅಲ್ಲಮಪ್ರಭು ಉದ್ಯಾನವನ(ಫ್ರೀಡಂ ಪಾರ್ಕ್)ದಲ್ಲಿ ಜ.24ರಿಂದ 26ರವರೆಗೆ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಬೃಹತ್ ಮಟ್ಟದಲ್ಲಿ ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನ ಏರ್ಪಟ್ಟಿದೆ. ಕುಪ್ಪಳಿಯ ಕುವೆಂಪು ಅವರ ಮನೆ ಕಲಾಕೃತಿಯನ್ನು ಕಲಾವಿದರು ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಧಾರ್ಮಿಕ ಕೇಂದ್ರ ಚಂದ್ರಗುತ್ತಿ ದೇವಾಲಯ ಜನರನ್ನು ಸೆಳೆಯುತ್ತಿದೆ ಎಂದರು.

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಧಾರ್ಮಿಕ, ಸಾಹಿತ್ಯಿಕ ಕಲಾಕೃತಿಗಳು, ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳಾದ ಟೆರಾಕೊಟ, ಹಸೆ ಚಿತ್ತಾರ, ರೇಷ್ಮೆ, ಬಿದಿರು, ರೈತರು ಬೆಳೆದ ಫಲ-ಪುಷ್ಪಗಳು, ರಾಷ್ಟ್ರಕವಿ ಕುವೆಂಪು ಅವರ ಪುಸ್ತಕ ಪ್ರದರ್ಶನ ತುಂಬಾ ವಿಶೇಷವಾಗಿದೆ ಎಂದು ತಿಳಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಒ ಹೇಮಂತ್.ಎನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಪಂ ಯೋಜನಾ ನಿರ್ದೇಶಕಿ ನಂದಿನಿ, ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

ವಿದ್ಯುನ್ಮಾನ ಸಂಪನ್ಮೂಲಗಳ ಬಳಕೆಯಿಂದ ಶೈಕ್ಷಣಿಕ ಉನ್ನತಿ ಸಾಧಿಸಿ

digimalenadu

ಶಿವಮೊಗ್ಗ
error: Content is protected !!