ಶಿವಮೊಗ್ಗ ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

Shivamogga ಶಿವಮೊಗ್ಗ | 28 ಜನವರಿ 2025 | ಡಿಜಿ ಮಲೆನಾಡು.ಕಾಂ
ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನಿಸಲಾಗಿದೆ. ಶಿವಮೊಗ್ಗ ಕರ್ನಾಟಕ ಸಂಘವು 2024ನೇ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಮರುಮುದ್ರಣಗೊಂಡ ಕೃತಿ, ಹಸ್ತ ಪ್ರತಿ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶ ಇರುವುದಿಲ್ಲ. ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಇತರ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು. ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ.
ಪುಸ್ತಕ ಬಹುಮಾನಕ್ಕೆ ಪುಸ್ತಕದ ಒಟ್ಟು 4 ಪ್ರತಿ ಕಳುಹಿಸಬೇಕು. ಬಹುಮಾನಕ್ಕೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಅಂಕಣ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ನೀಡಬೇಕು. ಬರಹಗಾರರು, ಪ್ರಕಾಶಕರು ಪತ್ರದ ಮುಖೇನ ಸ್ವವಿವರ, ವಿಳಾಸ, ಮೊಬೈಲ್ ನಂ. ಮತ್ತು ಯಾವ ಪ್ರಕಾರಕ್ಕೆ ಸಲ್ಲಿಸುತ್ತಿರುವುದು ಎಂಬ ಬಗ್ಗೆ ಲಿಖಿತವಾಗಿ ಮುದ್ರಿಸಿ ವಿವರ ಕಳುಹಿಸಬೇಕು. ಒಂದು ಪ್ರಕಾರಕ್ಕೆ ಕನಿಷ್ಠ 5 ಕೃತಿಗಳು ಬರದಿದ್ದರೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ವಿವಿಧ ಪ್ರಕಾರಕ್ಕೆ ಪುಸ್ತಕ ಕಳಿಸಿದಲ್ಲಿ ಒಂದೊಂದು ಪ್ರಕಾರಕ್ಕೂ 4 ಪುಸ್ತಕಗಳು ಪ್ರತ್ಯೇಕವಾಗಿರಬೇಕು.
ಕಾದಂಬರಿ ಪ್ರಕಾರಕ್ಕೆ ಕುವೆಂಪು, ಅನುವಾದಕ್ಕೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ, ಮಹಿಳಾ ಸಾಹಿತ್ಯಕ್ಕೆ ಎಂ.ಕೆ. ಇಂದಿರಾ ಬಹುಮಾನ, ಮುಸ್ಲಿಂ ಬರಹಗಾರರು ಪ್ರಕಾರಕ್ಕೆ ಪಿ. ಲಂಕೇಶ್ ಬಹುಮಾನ, ಕವನ ಸಂಕಲನ ಪ್ರಕಾರಕ್ಕೆ ಡಾ. ಜಿ. ಎಸ್. ಶಿವರುದ್ರಪ್ಪ ಬಹುಮಾನ, ಅಂಕಣ ಬರಹಗಾರರು ಪ್ರಕಾರಕ್ಕೆ ಡಾ. ಹಾ. ಮಾ. ನಾಯಕ, ಸಣ್ಣ ಕಥಾ ಸಂಕಲನ ಪ್ರಕಾರಕ್ಕೆ ಡಾ. ಯು. ಆರ್. ಅನಂತಮೂರ್ತಿ ಬಹುಮಾನ, ನಾಟಕ ಪ್ರಕಾರಕ್ಕೆ ಡಾ. ಕೆ. ವಿ. ಸುಬ್ಬಣ್ಣ ಬಹುಮಾನ, ಪ್ರವಾಸ ಸಾಹಿತ್ಯ ಪ್ರಕಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ, ವಿಜ್ಞಾನ ಸಾಹಿತ್ಯ ಪ್ರಕಾರಕ್ಕೆ ಹಸೂಡಿ ವೆಂಕಟಶಾಸ್ತ್ರಿ ಬಹುಮಾನ, ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಡಾ. ನಾ. ಡಿಸೋಜ ಬಹುಮಾನ ಹಾಗೂ ವೈದ್ಯ ಸಾಹಿತ್ಯ ಪ್ರಕಾರಕ್ಕೆ ಡಾ. ಎಚ್. ಡಿ.ಚಂದ್ರಪ್ಪಗೌಡ ಬಹುಮಾನ ನೀಡಲಾಗುತ್ತದೆ.
ಸಾಹಿತ್ಯ ಕೃತಿಗಳ 4 ಪ್ರತಿಗಳನ್ನು ಸಲ್ಲಿಸಲು 2025ರ ಮಾರ್ಚ್ 25 ಕಡೇ ದಿನ ಆಗಿರುತ್ತದೆ. ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ-577201 ಇವರಿಗೆ ಅಂಚೆ, ಕೊರಿಯರ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು. ಅತ್ಯುತ್ತಮ ಎಂದು ಆಯ್ಕೆಯಾದ ಕೃತಿಗಳಿಗೆ 10,000 ರೂ. ನಗದು ಬಹುಮಾನ ಮತ್ತು ಫಲಕ ನೀಡಿ ಗೌರವಿಸಲಾಗುವುದು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ವಿವರಗಳಿಗೆ ಕರ್ನಾಟಕ ಸಂಘದ ಕಚೇರಿ ಸಂಪರ್ಕಿಸಬಹುದಾಗಿದೆ. ಮೊ.ಸಂ. 9980159696, 8310876277 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/