ಬಾಣಂತಿ, ಶಿಶುಗಳ ಸುರಕ್ಷತೆಗೆ ಶ್ರಮಿಸಲು ವೈದ್ಯರಿಗೆ ಸೂಚನೆ

Shivamogga ಶಿವಮೊಗ್ಗ | 2 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ ಮತ್ತು ಶಿಶುಗಳ ಸಾವು ನಿಯಂತ್ರಿಸುವಲ್ಲಿ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರದೇ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾಣಂತಿ ಸಾವು ಕುರಿತು ಪರಾಮರ್ಶನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 2024ರ ಸೆಪ್ಟೆಬರ್‌ನಿಂದ ಈವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 8 ಪ್ರಕರಣಗಳು ದಾಖಲಾಗಿರುವುದು ಅತ್ಯಂತ ನೋವಿನ ಸಂಗತಿ. ಹೆರಿಗೆ ದಿನಕ್ಕೆ ಮುಂಚಿತವಾಗಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಸಂಭಾವ್ಯ ರಕ್ತಹೀನತೆ ಹಾಗೂ ಸೇವಿಸಬೇಕಾದ ಪೌಷ್ಟಿಕ ಆಹಾರ ಕುರಿತು ಸೂಕ್ತ ಹಾಗೂ ಸಕಾಲಿಕ ಸಲಹೆ ನೀಡಬೇಕು. ಬಾಣಂತಿಯರು ಕಾಲಕಾಲಕ್ಕೆ ರಕ್ತದೊತ್ತಡ, ಮಧುಮೇಹ ತಪಾಸಣೆಗಳನ್ನು ಮಾಡಿಸಬೇಕು ಎಂದರು.
ಕೆಲ ಬಾಣಂತಿಯರ ಸಾವಿನ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಇರುವ ಬಗ್ಗೆ ದೂರುಗಳಿದ್ದು, ವಾಸ್ತವ ಮಾಹಿತಿ ವರದಿಯನ್ನು ಪಡೆದು ಕೂಡಲೇ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ಅವರಿಗೆ ಸೂಚಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : [email protected]
Click on below this picture, Like & Follow Facebook Page ” Digi Malenadu “
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ಡಾ. ಮಲ್ಲಪ್ಪ, ಡಾ. ನಾಗರಾಜ ನಾಯ್ಕ್, ಡಾ. ಸ್ಮೃತಿ, ಡಾ. ಹೇಮಾ, ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/