ಸೂರ್ಯ ನಮಸ್ಕಾರದಿಂದ ಸದೃಢ ಆರೋಗ್ಯ

ಸೂರ್ಯ ನಮಸ್ಕಾರದಿಂದ ಸದೃಢ ಆರೋಗ್ಯ

Shivamogga ಶಿವಮೊಗ್ಗ | 4 ಫೆಬ್ರವರಿ 2025 | ಡಿಜಿ ಮಲೆನಾಡು.ಕಾಂ

ಸೂರ್ಯ ನಮಸ್ಕಾರದಿಂದ ಸದೃಢ ಆರೋಗ್ಯ ನಮ್ಮದಾಗುವುದರ ಜತೆಯಲ್ಲಿ ಆಯಸ್ಸು ವೃದ್ಧಿಸುತ್ತದೆ ಎಂದು ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಏರ್ಪಡಿಸಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೂರ್ಯ ನಮಸ್ಕಾರ ಆಸನಗಳ ರಾಜ. ದೇಹದಲ್ಲಿ ಎಲ್ಲ ಅಂಗಾಂಗಗಳಲ್ಲಿ ರಕ್ತ ಚೆನ್ನಾಗಿ ಸಂಚಾರ ಆಗುವುದರಿಂದ ದೇಹದಲ್ಲಿ ಯಾವುದೇ ಕಾಯಿಲೆಗಳು ನಮಗೆ ಬರುವುದಿಲ್ಲ. ನಿರಂತರವಾಗಿ ಅಭ್ಯಾಸ ಮಾಡುವುದರಿಂದ ನಾವುಗಳು ಸದಾ ಲವಲವಿಕೆ ಹಾಗೂ ಆರೋಗ್ಯವಂತರಾಗಿರುತ್ತೇವೆ ಎಂದು ತಿಳಿಸಿದರು.

ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ರಥಸಪ್ತಮಿ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ 5.30ಕ್ಕೆ ಪೂಜಾ ಕಾರ್ಯಕ್ರಮ ಪ್ರಾರಂಭವಾಗಿ 6 ಗಂಟೆಗೆ ಸರಿಯಾಗಿ ಅಖಂಡ ಸೂರ್ಯ ನಮಸ್ಕಾರ ಪ್ರಾರಂಭವಾಯಿತು. ಯೋಗ ಗುರು ಡಾ. ಪದ್ಮನಾಭ ಅಡಿಗ ಅವರು ರಥಸಪ್ತಮಿ ಹಾಗೂ ಸೂರ್ಯ ನಮಸ್ಕಾರದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : [email protected]

Click on below this picture, Like & Follow Facebook Page ” Digi Malenadu “

ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಾಖೆಗಳಿಂದ ಸಾವಿರಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯ ನಮಸ್ಕಾರ ಮಾಡಿದರು. 300ಕ್ಕೂ ಹೆಚ್ಚು ಶಿಬಿರಾರ್ಥಿಗಳು 12 ಮಂಡಲ ಸೂರ್ಯ ನಮಸ್ಕಾರ ಮಾಡಿದರು. ಚಂದ್ರಶೇಖರಯ್ಯ, ಓಂಕಾರ್, ಡಾ. ನಾಗರಾಜ ಪರಿಸರ, ಜಿ.ವಿಜಯಕುಮಾರ್, ಜಗದೀಶ್, ಲವಕುಮಾರ, ಚಂದ್ರಶೇಖರಯ್ಯ, ಹರೀಶ್, ನೀಲಕಂಠ ರಾವ್ ಹಾಗೂ ಎಲ್ಲ ಶಾಖೆಯ ಯೋಗ ಶಿಕ್ಷಕರಗಳು ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಶಿವಮೊಗ್ಗ ವಿತರಕರ ಸಂಘದಿಂದ ವಿತರಕರ ದಿನಾಚರಣೆ

digimalenadu

ಶಿವಮೊಗ್ಗ
error: Content is protected !!