ಆರ್‌ಎಂಬಿ ಸಂಸ್ಥೆಯಿಂದ ವ್ಯಾಪಾರಸ್ಥರಿಗೆ ಅನುಕೂಲ
ಶಿವಮೊಗ್ಗ | 17 ಜುಲೈ 2025 | ಡಿಜಿ ಮಲೆನಾಡು.ಕಾಂ
ವ್ಯಾಪಾರಸ್ಥರಿಗೆ ಉದ್ಯಮ ವಹಿವಾಟು ವಿಸ್ತರಿಸಿಕೊಳ್ಳಲು ಆರ್‌ಎಂಬಿ ನೆರವಾಗುತ್ತದೆ ಎಂದು ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ನಗರದ ಕಂಟ್ರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ರೋಟರಿ ಆರ್‌ಎಂಬಿ ಶಿವಮೊಗ್ಗ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಜತೆಯಲ್ಲಿ ಬೇರೆ ಎಲ್ಲ ಕಡೆ ಅರ್‌ಎಂಬಿ ಸ್ಥಾಪಿಸಬೇಕು. ಇದರ ಸದುಪಯೋಗ ನಮ್ಮ ಬೇರೆ ಜಿಲ್ಲೆಯಲ್ಲಿರುವ ರೋಟೆರಿ ಸದಸ್ಯರಿಗೂ ಸಿಗುವಂತೆ ಆಗಬೇಕು ಎಂದು ತಿಳಿಸಿದರು.
ರೋಟರಿ ಆರ್‌ಎಂಬಿ ಶಿವಮೊಗ್ಗದ ನೂತನ ಅಧ್ಯಕ್ಷರಾಗಿ ಕಿರಣ್ ಕುಮಾರ್ ಜಿ ಅಧಿಕಾರ ಸ್ವೀಕರಿಸಿದರು. ಆರ್‌ಎಂಬಿ ಶಿವಮೊಗ್ಗ ಸ್ಥಾಪಕ ಅಧ್ಯಕ್ಷ ವಸಂತ್ ಹೋಬಳಿದಾರ್ ಅವರು ಆರ್‌ಎಂಬಿ ಸಂಸ್ಥೆ ನಡೆದು ಬಂದ ದಾರಿ ಹಾಗೂ ಅದರ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ಉಪಾಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಮಂಜುನಾಥ್ ರಾವ್ ಕದಂ, ಸಹ ಕಾರ್ಯದರ್ಶಿಯಾಗಿ ಎಸ್ ಪಿ ಶಂಕರ್, ಖಜಾಂಚಿಯಾಗಿ ನೆಪ್ಚೂನ್ ಕಿಶೋರ್ ಕುಮಾರ್, ನಿರ್ದೇಶಕರಾಗಿ ಜಿ.ವಿಜಯಕುಮಾರ್, ಬಸವರಾಜ.ಬಿ, ಚಂದ್ರು ಜೆಪಿ, ಗೋವರ್ಧನ್, ಆರ್ ಎಂ ಬಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ನಿಕಟಪೂರ್ವ ಅಧ್ಯಕ್ಷ ಮೋಹನ್ ಎಚ್.ಎಸ್., ನಿಕಟಪೂರ್ವ ಕಾರ್ಯದರ್ಶಿ ರವೀಂದ್ರನಾಥ್ ಐತಾಳ್, ವಲಯ 11ರ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣಗೌಡ, ವಲಯ 10ರ ಸಹಾಯಕ ಗವರ್ನರ್ ಕೆಪಿ.ಶೆಟ್ಟಿ, ನೂತನ ಕಾರ್ಯದರ್ಶಿ ಮಂಜುನಾಥ್ ರಾವ್ ಕದಂ, ವಲಯ 10 ಮತ್ತು 11ರ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿರುವ ಎಲ್ಲಾ ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷರಾಗಿ ಎನ್.ಗೋಪಿನಾಥ್ ಆಯ್ಕೆ
