ಔಷಧ ಶಿಕ್ಷಣದಲ್ಲಿ ಕೌಶಲ್ಯ ಮತ್ತು ಸೃಜನಶೀಲತೆ ಅತ್ಯಂತ ಅಗತ್ಯ, NCP ಕಲಾಸಂಗಮದಲ್ಲಿ ಪರಿಣಿತರ ಸಂದೇಶ

ಔಷಧ ಶಿಕ್ಷಣದಲ್ಲಿ ಕೌಶಲ್ಯ ಮತ್ತು ಸೃಜನಶೀಲತೆ ಅತ್ಯಂತ ಅಗತ್ಯ, NCP ಕಲಾಸಂಗಮದಲ್ಲಿ ಪರಿಣಿತರ ಸಂದೇಶ

ಶಿವಮೊಗ್ಗ | 13 ಸೆಪ್ಟೆಂಬರ್‌ 2025 | ಡಿಜಿ ಮಲೆನಾಡು.ಕಾಂ

ಔಷಧ ವಿಜ್ಞಾನಕ್ಕೆ ಸಂಗೀತ, ಸಾಹಿತ್ಯ ಸೃಜನಶೀಲತೆಯ ಅವಿನಾಭಾವ ಸಂಬಂಧ ಇದ್ದು, ಕ್ರಿಯಾಶೀಲತೆ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಎನ್.ಸಿ.ಪಿ ಕಲಾಸಂಗಮ-2025’ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಗೀತದಲ್ಲಿ ಔಷಧೀಯ ಗುಣಗಳ ದಿವ್ಯ ಶಕ್ತಿಯಿದೆ. ಪ್ರಾಣಿ ಪಕ್ಷಿಗಳಿಗೂ ದಿವ್ಯ ಔಷಧವಾಗಿ ಮಾನಸಿಕ ನೆಮ್ಮದಿ ನೀಡುತ್ತದೆ. ಮನುಷ್ಯನಿಗೆ ಪರಿಪೂರ್ಣ ನೆಮ್ಮದಿ, ಶಾಂತಿ ಇದ್ದಾಗ ಮಾತ್ರ ವ್ಯಕ್ತಿತ್ವ ಪೂರ್ಣನಾಗಿ ಹೊರಬರಲು ಸಾಧ್ಯ. ಈ ಹಿನ್ನಲೆಯಲ್ಲಿ ಕ್ರಿಯಾಶೀಲ ಬದುಕನ್ನು ಕಟ್ಟಿಕೊಳ್ಳಬೇಕು. ಆಧುನಿಕ‌ ಜಾಲತಾಣ ಎಂಬ ಸಾಂಕ್ರಾಮಿಕ ರೋಗ ನಿಮ್ಮನ್ನು ಭಾದಿಸದಿರಲಿ ಎಂದು ತಿಳಿಸಿದರು.

ಔಷಧ ವಿಭಾಗದಲ್ಲಿನ ವ್ಯಾಸಂಗವು, ಖಚಿತ ಉದ್ಯೋಗ ಭರವಸೆಯನ್ನು ನೀಡುತ್ತದೆ. ಮನುಷ್ಯನ ಮೇಲೆ ಔಷಧಗಳು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಅಭ್ಯಾಸ ಮಾಡಿದ್ದೀರಿ. ಇದರೊಂದಿಗೆ ಜವಾಬ್ದಾರಿಯುತವಾಗಿ ರೋಗಿ ಆರೈಕೆ ಮತ್ತು ಔಷಧಗಳ ನಿರ್ವಹಣೆ ನಡೆಸಬೇಕು ಎಂದರು.

ಬೆಂಗಳೂರಿನ ಹರ್ಬ್ ಅರ್ಟಿಜನ್ ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಗುರುರಾಜ್ ಮಾತನಾಡಿ, ಗುರಿಯ ಸ್ಪಷ್ಟತೆಯನ್ನು ಹೊಂದಬೇಕು. ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯತೆಗಳು ಸಾಧನೆಯ ಪರಿಪೂರ್ಣ ಹಂತಕ್ಕೆ ತಲುಪಲು ಸಾಧ್ಯ ಮಾಡಿಕೊಡಲಿದೆ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸ್ಪರ್ಧಾತ್ಮಕ ಮನೋಭಾವ ಅಭಿವ್ಯಕ್ತಿಗೊಳಿಸಲು ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲು ಪಠ್ಯೇತರ ಚಟುವಟಿಕೆಗಳು ಸಾಧ್ಯ ಮಾಡಿಕೊಡಲಿದೆ. ಔಷಧ ಕ್ಷೇತ್ರದಲ್ಲಿ ಪ್ರತಿನಿತ್ಯ ವಿಪುಲ ಬದಲಾವಣೆ ನಡೆಯುತ್ತಿದ್ದು, ವಾಸ್ತವತೆಗೆ ಹೊಂದಿಕೆಯಾಗುವಂತೆ ನಿಮ್ಮನ್ನು ನೀವು ಕೌಶಲ್ಯಾಧಾರಿತವಾಗಿ ತೆರೆದುಕೊಳ್ಳಬೇಕು ಎಂದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಕಾಲೇಜಿನ ಪ್ರಾಂಶುಪಾಲ ಡಾ. ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಂ.ಫಾರ್ಮ್ ಫಾರ್ಮಾಸ್ಯುಟಿಕ್ಸ್ ವಿಭಾಗದಲ್ಲಿ ಬಂಗಾರದ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಂಜನಾ, 9ನೇ ರ್ಯಾಂಕ್‌ ವಿದ್ಯಾರ್ಥಿನಿ ಜುವೈರಿಯಾ ಖಾನಂ, ಫಾರ್ಮಾಕಾಗ್ನಸಿ ವಿಭಾಗದಲ್ಲಿ ಏಳನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಲಿಖಿತ. ಕೆ ಸೇರಿದಂತೆ  ಬಿ.ಫಾರ್ಮ್ ವಿವಿಧ ಕೋರ್ಸ್‌ಗಳ ರ್ಯಾಂಕ್‌ ವಿಜೇತ ಮತ್ತು ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಕೌಶಲ್ಯವಿಲ್ಲದೇ ಉದ್ಯೋಗವಿಲ್ಲ, ಬಾಷ್ ಮತ್ತು ವಾಣಿಜ್ಯ ಸಂಘದ ಸಹಯೋಗದಲ್ಲಿ ತರಬೇತಿ ಶಿಬಿರ

digimalenadu

ಶಿವಮೊಗ್ಗ
error: Content is protected !!