ಮಹರ್ಷಿ ವಾಲ್ಮೀಕಿ ಕುರಿತು ಅಧ್ಯಯನ ನಡೆಸಿ
ಶಿವಮೊಗ್ಗ | 7 ಅಕ್ಟೋಬರ್ 2025 | ಡಿಜಿ ಮಲೆನಾಡು.ಕಾಂ
ಮಹರ್ಷಿ ವಾಲ್ಮೀಕಿ ತತ್ವ ಆದರ್ಶ ಗುಣಗಳು ಇಂದಿಗೂ ಪ್ರಸ್ತುತ. ಯುವಜನತೆ ಮಹರ್ಷಿ ವಾಲ್ಮೀಕಿ ಕುರಿತು ಅಧ್ಯಯನ ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಬರೆದ ಮಹಾಕಾವ್ಯ ರಾಮಾಯಣ ಕೇವಲ ಕಥೆಯಲ್ಲ. ನೈತಿಕ ಮೌಲ್ಯ, ಧರ್ಮ, ಆದರ್ಶ ಮಾರ್ಗವನ್ನು ಕಲಿಸುವ ಮಹಾಗ್ರಂಥ ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆಗೆ ನಮ್ಮ ಇತಿಹಾಸ ಹಾಗೂ ಚರಿತ್ರೆಯ ಬಗ್ಗೆ ಮಾಹಿತಿ ತಿಳಿಸುವುದು ತುಂಬಾ ಅಗತ್ಯವಾಗಿದೆ. ಮನುಷ್ಯ ಹಿಂದೆ ಮಾಡಿದ ತಪ್ಪುಗಳನ್ನು ಮರೆತು ಪರಿವರ್ತನೆಯಾಗಿ ಮುಂದಿನ ದಿನಗಳಲ್ಲಿ ಸಮಾಜದ ಬೆಳವಣಿಗೆಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಸ್ವದೇಶದಲ್ಲಿ ಆಚರಣೆ ಮಾಡುವ ಜತೆಯಲ್ಲಿ ವಿದೇಶಗಳಲ್ಲೂ ಸಹ ಆಚರಣೆ ಮಾಡುತ್ತಾರೆ. ಹಾಗೆ ಮಹರ್ಷಿ ವಾಲ್ಮೀಕಿ ಬರೆದ ಗ್ರಂಥದಲ್ಲಿನ ಆದರ್ಶ ಮತ್ತು ಸಿದ್ಧಾಂತಗಳನ್ನು ಯುವಜನತೆ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಪ್ರಾಂಶುಪಾಲ ಆರ್.ಸೂರ್ಯನಾರಾಯಣ, ಶಿಕ್ಷಕರಾದ ಸುಷ್ಮಾ, ಕಾವ್ಯ, ಸುಜಾತ, ಪ್ರತಿಮಾ, ರೂಪ, ವಿದ್ಯಾ, ದೀಪಿಕಾ, ಸುಪ್ರೀತಾ, ಹರ್ಷಿತಾ, ರುಕಯ ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
