ಜೆಸಿಐ ಸದಸ್ಯತ್ವದಿಂದ ಕೌಶಲ್ಯ ಮತ್ತು ವ್ಯವಹಾರ ಜ್ಞಾನ ವೃದ್ಧಿ, ಶಿವಮೊಗ್ಗದಲ್ಲಿ ತರಬೇತಿ ಶಿಬಿರ
Shivamogga ಶಿವಮೊಗ್ಗ | 8 ಅಕ್ಟೋಬರ್ 2025 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ಜೆಸಿಐ ಸಂಸ್ಥೆಗೆ ಸೇರುವುದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವ ಜತೆಯಲ್ಲಿ ಕೌಶಲ್ಯ ಹಾಗೂ ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿ, ಜೆಸಿಐ ಸಂಸ್ಥೆ ವಿಶ್ವಾದ್ಯಂತ ಮಾನವೀಯ ಸೇವೆಗಳನ್ನು ಮಾಡುವುದರ ಜತೆಗೆ ಯುವಜನರಲ್ಲಿ ಕೌಶಲ್ಯ, ಜ್ಞಾನ ಮತ್ತು ವ್ಯವಹಾರ ಜ್ಞಾನವನ್ನು ವೃದ್ಧಿ ಮಾಡುತ್ತದೆ. ಜೆಸಿ ಸಂಸ್ಥೆ ತರಬೇತಿಗಳಲ್ಲಿ ಪಾಲ್ಗೊಂಡರೆ ಕೌಶಲ್ಯ ವೃದ್ಧಿಯ ಜತೆಗೆ ಜೀವನೋತ್ಸಾಹ ಮೂಡುತ್ತದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾಸ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಕೌಶಲ್ಯಗಳು ಅತಿ ಮುಖ್ಯ. ಸರಿಯಾದ ಕೌಶಲ್ಯ ಇದ್ದರೆ ನಾವು ಯಶಸ್ವಿ ಉದ್ಯಮಿಗಳು ಹಾಗೂ ಉದ್ಯೋಗಸ್ಥರಾಗುತ್ತೇವೆ. ಸಂದರ್ಶನಗಳಲ್ಲಿ ಭಾಗವಹಿಸಬೇಕಾದರೆ ಎಲ್ಲಾ ವಿಷಯಗಳ ಅರಿವು ಜ್ಞಾನ ಹಾಗೂ ವಿಷಯಕ್ಕೆ ಸಂಬಂಧಪಟ್ಟ ಕೌಶಲ್ಯ ಅತಿ ಮುಖ್ಯ ಎಂದರು.
ಎಲ್ಲರೂ ಜೆಸಿಐ ಸಂಸ್ಥೆ ಸೇರುವುದರ ಮುಖಾಂತರ ಸಂಸ್ಥೆಯ ಕಾರ್ಯ ಚಟುವಟಿಕೆ, ಸೇವಾ ಚಟುವಟಿಕೆಗೆ ಕೈಜೋಡಿಸಬೇಕು. ಸಮಾಜದಲ್ಲಿ ಸದೃಢ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಹ್ಯಾದ್ರಿ ಚಿಟ್ಸ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್ ಮಾತನಾಡಿ, ಎಲ್ಲಾ ಹಣಕಾಸು ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇಂತಹ ತರಬೇತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಎಷ್ಟೇ ವಿಷಯಗಳನ್ನು ತಿಳಿದುಕೊಂಡಿದ್ದರೂ ಇಂತಹ ತರಬೇತಿಗಳು ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ತರಬೇತುದಾರರಾದ ಸಪ್ನ ಅನುಷ್, ಕಾರ್ಯದರ್ಶಿ ಪ್ರಮೋದ್ ಉಡುಪ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
