ನಾವೀನ್ಯಯುತ ಚಿಂತನೆ ಸಮಾಜ ಉನ್ನತಿಕರಣದ ಶಕ್ತಿ

ನಾವೀನ್ಯಯುತ ಚಿಂತನೆ ಸಮಾಜ ಉನ್ನತಿಕರಣದ ಶಕ್ತಿ

ಶಿವಮೊಗ್ಗ | 6 ಏಪ್ರಿಲ್‌ 2026 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ನಾವೀನ್ಯಯುತ ಚಿಂತನೆ‌ ಮತ್ತು ಅದರ ವಿನ್ಯಾಸ ಸಮಾಜದ ಅಭಿವೃದ್ಧಿಯ ಪ್ರಮುಖ ಬದಲಾವಣೆಯ ಶಕ್ತಿಯಾಗಿದೆ ಎಂದು ಎಐಸಿಟಿಇ ಇನೋವೇಶನ್‌ ಕೇಂದ್ರದ ಪ್ರಾದೇಶಿಕ ಸಂಯೋಜಕ ಅಶೀಷ್‌ ತ್ರಿಪಾಠಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ನಗರದ  ಜೆ ಎನ್‌ ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್‌ ಹಾಗೂ ಎಸ್‌ಬಿಐ ಫೌಂಡೇಷನ್‌ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಐದು ದಿನದ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್‌ ಕ್ಯಾಂಪ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ, ಆವಿಷ್ಕಾರ ಎಂಬುದು ಆಯ್ಕೆಯಲ್ಲ, ಅದು ಅವಶ್ಯಕತೆ. ಇದು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದರ ಜತೆಗೆ ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದ್ದರಿಂದ ಯುವ ಸಮೂಹದಲ್ಲಿ ಕಾಲೇಜು ಹಂತಗಳಲ್ಲಿಯೆ, ಉದ್ಯಮಶೀಲ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ಅರೇಕಾ ಟೀ ಕಂಪನಿ ಸಂಸ್ಥಾಪಕ ನಿವೇದನ್‌ ನೆಂಪೆ ಮಾತನಾಡಿ, ಹೊಸತನದೆಡೆಗೆ ಚಿಂತಿಸುವಾಗ ಮೂದಲಿಕೆಯ ಮಾತುಗಳು ಸಹಜ. ಸಮಸ್ಯೆಗಳಿದ್ದ ಕಡೆ ಅವಕಾಶ ಹೆಚ್ಚಾಗಿರುತ್ತದೆ. ಅದರ ಜತೆ ಸವಾಲುಗಳು ನಮ್ಮನ್ನು ಕಾಡುತ್ತದೆ. ಅಂತಹ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ದೇಶ ಸೇವಾ ಆಧಾರಿತ ಆರ್ಥಿಕತೆಯಿಂದ, ಜ್ಞಾನ ಆಧಾರಿತ ಆರ್ಥಿಕತೆಯತ್ತ ಸಾಗಬೇಕು. ನಾವೀನ್ಯತೆ ಎಂದಾಗ ನಾವು ಹೊಸದನ್ನು ಸೃಷ್ಟಿಸುವುದು ಮಾತ್ರ ಎಂದು ಅರ್ಥೈಸುತ್ತೇವೆ. ಆದರೆ ಅದು ಸದಾ ಸಂಪೂರ್ಣ ಹೊಸದು ಆಗಿರಬೇಕೆಂದಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಸಣ್ಣ ಸುಧಾರಣೆಗಳನ್ನು ಮಾಡುವುದು ಕೂಡ ಒಂದು ಮಹತ್ವದ ಆವಿಷ್ಕಾರವಾಗಿದೆ ಎಂದರು.

ಕರ್ನಾಟಕದಲ್ಲಿ 2 ಕಡೆ ಬೂಟ್ ಕ್ಯಾಂಪ್: ಜಮ್ಮು ಕಾಶ್ಮೀರ, ಲಡಾಕ್ ಸೇರಿದಂತೆ ದೇಶದಾದ್ಯಂತ 30 ಕೇಂದ್ರಗಳಲ್ಲಿ ಬೂಟ್ ಕ್ಯಾಂಪ್‌ ನಡೆಯುತ್ತಿದ್ದು, ವಿಶೇಷವಾಗಿ ಕರ್ನಾಟಕದಲ್ಲಿ 2 ಕಾಲೇಜುಗಳಲ್ಲಿ ಮಾತ್ರ ಈ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ಜೆ.ಎನ್.ಎನ್.ಸಿ ಕಾಲೇಜು ಕೂಡ ಒಂದು ಎಂಬುದು ಹೆಮ್ಮೆಯ ವಿಷಯವಾಗಿದೆ. ದೇಶದ ವಿವಿಧ ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೊನೆಯ ದಿನ ವಿದ್ಯಾರ್ಥಿಗಳು ತಮ್ಮ ನಾವೀನ್ಯಯುತ ಚಿಂತನೆಗಳನ್ನು ಪ್ರಸ್ತುತ ಪಡಿಸುವರು ಎಂದು ಕಾರ್ಯಕ್ರಮ ಸಂಯೋಜಕ‌ ಕೆ.ಎಲ್.ಅರುಣ್ ಕುಮಾರ್ ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್‌, ಸಂಶೋಧನಾ ಡೀನ್‌ ಡಾ. ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್‌ಎನ್‌ಸಿಇ ಐಡಿಯಾ ಲ್ಯಾಬ್‌ ಸಂಯೋಜಕ ಡಾ. ಎಂ.ಎಚ್.ಮೋಯಿನುದ್ದಿನ್‌ ಖಾನ್‌, ಬೂಟ್‌ಕ್ಯಾಂಪ್‌ ಸಂಯೋಜಕ ಕೆ.ಎಲ್.ಅರುಣ್‌ ಕುಮಾರ್‌, ವಾದ್ವಾನಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭಾ ಉಪಸ್ಥಿತರಿದ್ದರು.

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ನಿಮ್ಮ ವಾಹನದ ಮೇಲೆ ಎಷ್ಟು ದಂಡ ಇದೆ ಚೆಕ್‌ ಮಾಡಿಕೊಳ್ಳಿ . . . ಇನ್ಮುಂದೆ ಪೊಲೀಸರು ಕಂಡಂತೆ . . . Fine

digimalenadu

ಶಿವಮೊಗ್ಗ

Related articles

error: Content is protected !!