ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ, ಸಿ ಬಿ ಎಸ್ ಇ ರಿಸಲ್ಟ್
ಶಿವಮೊಗ್ಗ | 17 ಏಪ್ರಿಲ್ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಪಬ್ಲಿಕ್ ಶಾಲೆಯು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಪರೀಕ್ಷೆ ಬರೆದ 163 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 102 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 32 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಕೀರ್ತನ.ಎಚ್.ಪಾಟೀಲ್ (ಶೇ.97.6), ಹಾಝಿರಾ ಮದಿಹ ಇಂದಾಡಿ (ಶೇ.97), ಅನುಷ್ಕಾ.ಕೆ (ಶೇ.96.6), ನವ್ಯ.ವೈ.ಮಥಡ್ (96.2), ವಿಪುಲಾ ಗಿರೀಶ್ ಸದವರ್ತಿ(ಶೇ.96.2), ಸಮನ್ವಿತ.ಎಸ್.ಪಿ (ಶೇ.96) ಅಂಕ ಪಡೆದಿದ್ದಾರೆ.
ವಿಶೇಷವಾಗಿ ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದು, ಇಂಗ್ಲೀಷ್ ವಿಷಯದಲ್ಲಿ 3 ವಿದ್ಯಾರ್ಥಿಗಳು, ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ 3, ಸಮಾಜ ವಿಜ್ಞಾನ ವಿಷಯದಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಕನ್ನಡದಲ್ಲಿ ಓರ್ವ ವಿದ್ಯಾರ್ಥಿನಿ 100ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿ ಹಾಝಿರಾ ಮದಿಹ ಇಂದಾಡಿ ಇಂಗ್ಲೀಷ್ ವಿಷಯದಲ್ಲಿ 100 ಅಂಕ, ಅನುಷ್ಕಾ.ಕೆ ಇಂಗ್ಲೀಷ್ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ತಲಾ 100 ಅಂಕ, ಸೈಯದ್ ರಾಹಿಲ್ ಇಂಗ್ಲೀಷ್ ಮತ್ತು ಸಮಾಜ ವಿಷಯದಲ್ಲಿ 100 ಅಂಕ, ಪ್ರಾರ್ಥನಾ. ಎಸ್.ಎಂ ಕನ್ನಡದಲ್ಲಿ 100 ಅಂಕ, ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ನಿದಾ ನಾಝ್.ಎಸ್.ಎ ಮತ್ತು ವಿಭಾ.ಎಸ್.ಗೌಡರ್ 100 ಅಂಕ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕ ಗಳಿಕೆಯು ಶೇ. 78.57 ಆಗಿದೆ.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಫಲಿತಾಂಶವು ಶಾಲೆಯ ಶೈಕ್ಷಣಿಕ ಗುಣಮಟ್ಟ ಮತ್ತು ಸಮಗ್ರ ತರಬೇತಿಯ ಪ್ರತೀಕವಾಗಿದ್ದು, ಎಲ್ಲ ವಿದ್ಯಾರ್ಥಿಗಳು 6ನೇ ವಿಷಯವಾಗಿ ಇನ್ಫಾರ್ಮೇಶನ್ ಟೆಕ್ನಾಲಜಿ ಅಧ್ಯಯನ ನಡೆಸಿರುವುದು ವಿಶೇಷ ಎಂದು ಪ್ರಾಚಾರ್ಯ ನವೀನ.ಎಂ.ಪಾಯಸ್ ತಿಳಿಸಿದ್ದಾರೆ. ಸಾಧಕರಿಗೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ, ಜೆ ಎನ್ ಎನ್ ಸಿ ಇ ಉತ್ಥಾನ, ದಶಮಾನೋತ್ಸವ ಸಂಭ್ರಮ
