ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ
ಶಿವಮೊಗ್ಗ | 24 ಏಪ್ರಿಲ್ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ಆಧುನಿಕ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯನ ಜೀವನಶೈಲಿ ದುರ್ಬಲಗೊಳ್ಳುತ್ತಿದ್ದು, ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಿಂದ ಗುರುವಾರ ಮತ್ತೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಲ್ಲಿ ಕಾಡುತ್ತಿರುವ ಅತಿದೊಡ್ಡ ರೋಗವೆಂದರೆ ಸೋಮಾರಿತನ. ಆಧುನಿಕ ಜೀವನಶೈಲಿಯಲ್ಲಿ ದೇಹ ದಂಡಿಸಿ ಕೆಲಸ ಮಾಡುವ ಅನಿವಾರ್ಯತೆ ನಿರ್ಮಾಣವಾಗುತ್ತಿಲ್ಲ. ಇದರ ಪರಿಣಾಮವಾಗಿ ಸಾವಿರಾರು ಯುವ ಸಮೂಹ ರೋಗಗ್ರಸ್ತರಾಗಿ ಬದಲಾಗುತ್ತಿದ್ದಾರೆ. ಬದುಕುವ ರೀತಿಯು ಪ್ರಕೃತಿಯ ನಿಯಮ ಮೀರಿದೆ. ಜಂಕ್ ಆಹಾರಗಳನ್ನು ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿದ್ದೇವೆ ವಿನಃ ಶ್ರಮವಹಿಸಿ ಕೆಲಸ ಮಾಡುವ ಪ್ರವೃತ್ತಿ ಬಿಟ್ಟಿದ್ದೇವೆ ಎಂದು ತಿಳಿಸಿದರು..
ಜ್ಞಾನದ ವಿಕಸನದ ಜೊತೆಗೆ ದೇಹ ದಂಡನೆಗೂ ಆದ್ಯತೆ ನೀಡಬೇಕು. ಪ್ರತಿದಿನ ಇಪ್ಪತ್ತು ನಿಮಿಷದ ನಡಿಗೆಯು ಹೃದಯದ ಆಯಸ್ಸನ್ನು ಜಾಸ್ತಿ ಮಾಡುತ್ತದೆ. ಬೆಳಗಿನ ಸೂರ್ಯನ ಕಿರಣಗಳು ನೀಡುವ ಪ್ರಕಾಶತೆಗೆ ದೇಹ ಒಗ್ಗಿಕೊಂಡಾಗ, ಚರ್ಮದ ಮೂಲಕ ವಿಟಮಿನ್ ಡಿ ಸಿಗುತ್ತದೆ. ಬದುಕುವ ವಿಧಾನಗಳನ್ನು ಸುಧಾರಿಸಿಕೊಂಡಾಗ, ಕೃತಕ ಔಷಧಗಳಿಂದ ದೂರಾಗುತ್ತೇವೆ ಎಂದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಪ್ರಾಚಾರ್ಯ ಡಾ. ಎನ್.ಕೆ.ಚಿದಾನಂದ, ಶಾರದಾ ವಿಲಾಸ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುಧೀಂದ್ರ, ಶಿಬಿರದ ಸಂಯೋಜನಾಧಿಕಾರಿ ಮಂಜುನಾಥ.ಡಿ.ಎಸ್ ಉಪಸ್ಥಿತರಿದ್ದರು.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ, ಸಿ ಬಿ ಎಸ್ ಇ ರಿಸಲ್ಟ್
