ಸಿವಿಲ್, ಎಲೆಕ್ಟ್ರಿಕಲ್ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ ಏ. 14ರವರೆಗೆ ಅವಕಾಶ
ಉದ್ಯೋಗ ಜಗತ್ತು Job World | 7 ಏಪ್ರಿಲ್ 2022 | ಡಿಜಿ ಮಲೆನಾಡು.ಕಾಂ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಷನಲ್ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಬಿಸಿಸಿ) ನಲ್ಲಿ ಖಾಲಿ ಇರುವ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿ, ಕ್ರೀಡೆ ಮತ್ತು ಸಿನಿಮಾ ಕುರಿತ ಸುದ್ದಿ ನೀಡುವ ಫೇಸ್‌ಬುಕ್ ಪೇಜ್ : ಡಿಜಿ ಮಲೆನಾಡು : www.facebook.com/digimalenadu
ವಿದ್ಯಾರ್ಹತೆ: ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಪೂರ್ಣ ಅವಧಿಯ ಡಿಪ್ಲೋಮಾ ಉತ್ತೀರ್ಣ ಆಗಿದ್ದು, ಶೇ. 60 ಅಂಕ ಗಳಿಸಿರಬೇಕು. ಯಾವುದೇ ವೃತ್ತಿ ಅನುಭವದ ಅವಶ್ಯಕತೆ ಇರುವುದಿಲ್ಲ. ಮ್ಯಾನೇಜರ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಶೇ. 60 ಅಂಕ ಗಳಿಸಿರಬೇಕು. ಮ್ಯಾನೇಜರ್ ಹುದ್ದೆಗೆ ವೃತ್ತಿ ಅನುಭವ ಅಗತ್ಯವಿದೆ.
ಹುದ್ದೆಗಳ ಸಂಖ್ಯೆ: ನ್ಯಾಷನಲ್ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಬಿಸಿಸಿ) ನಲ್ಲಿ ಖಾಲಿ ಇರುವ 81 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜ್ಯೂನಿಯರ್ ಇಂಜಿನಿಯರ್ (ಸಿವಿಲ್)-60(ಮಾಸಿಕ ವೇತನ 27,270 ರೂ), ಜ್ಯೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್-20(ಮಾಸಿಕ ವೇತನ 27,270 ರೂ.) ಹಾಗೂ ಮ್ಯಾನೇಜರ್-1(ಮಾಸಿಕ ವೇತನ 70,000 ರೂ. – 2,00,000 ರೂ,) ವೇತನ ಇದೆ.
ಡಿಜಿ ಮಲೆನಾಡು.ಕಾಂ | ಜಾಹಿರಾತು ಮೊಬೈಲ್ ಸಂಖ್ಯೆ: 9449422942
ಇ-ಮೇಲ್ : digimalenadu@gmail.com
ಅರ್ಜಿ ಶುಲ್ಕ, ವಿಧಾನ, ಕಡೇ ದಿನಾಂಕ: ಅರ್ಜಿ ಸಲ್ಲಿಕೆಗೆ ಏ. 14ರವರೆಗೆ ಅವಕಾಶ ಇದೆ. ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಸಂಸ್ಥೆಯ ಅಭ್ಯರ್ಥಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು.
ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ನೇಮಕಾತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಫೇಸ್‌ಬುಕ್ ಪೇಜ್ : ಉದ್ಯೋಗ ಜಗತ್ತು Job World : www.facebook.com/jobworldkarnataka
ಪ್ರತಿ ದಿನ ನಿರಂತರವಾಗಿ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮಾಡಿಆಯ್ಕೆ ವಿಧಾನ: ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂಪೂರ್ಣ ಮಾಹಿತಿಗಾಗಿ ಉದ್ಯೋಗ ನೇಮಕಾತಿ ಪ್ರಕಟಣೆಯ ಲಿಂಕ್ ಕ್ಲಿಕ್ ಮಾಡಿ: https://www.nbccindia.in/pdfData/jobs/Advt_JE_Civil_Elec_DGM_Civil_06_2022.pdf