ಸ್ಥಳೀಯ ಸಂಸ್ಥೆಗಳಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏ. 29ರವರೆಗೆ ಅವಕಾಶ
ಉದ್ಯೋಗ ಜಗತ್ತು Job World | 6 ಏಪ್ರಿಲ್ 2022 | ಡಿಜಿ ಮಲೆನಾಡು.ಕಾಂ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಒಳಗೊಂಡಂತೆ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳ ಗ್ರೂಪ್ ಸಿ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿ, ಕ್ರೀಡೆ ಮತ್ತು ಸಿನಿಮಾ ಕುರಿತ ಸುದ್ದಿ ನೀಡುವ ಫೇಸ್‌ಬುಕ್ ಪೇಜ್ : ಡಿಜಿ ಮಲೆನಾಡು : www.facebook.com/digimalenadu
ವಿದ್ಯಾರ್ಹತೆ: ಕಿರಿಯ ಅಭಿಯಂತರ(ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್ ಡಿಪ್ಲೋಮಾ, ಕಿರಿಯ ಆರೋಗ್ಯ ನೀರಿಕ್ಷಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಹಾಗೂ ಸ್ಯಾನಿಟರಿ ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೋಮಾ ಉತ್ತೀರ್ಣ ಆಗಿರಬೇಕು. ಎಲೆಕ್ಟ್ರಿಷಿಯನ್ ಗ್ರೇಡ್-1, ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಎಲೆಕ್ಟ್ರಿಕಲ್/ಫಿಟ್ಟರ್ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು. ಎನ್‌ಎಸಿಯಲ್ಲಿ ಒಂದು ವರ್ಷದ ತರಬೇತಿ ಪಡೆದಿರಬೇಕು. ಎಲೆಕ್ಟ್ರಿಷಿಯನ್ ಗ್ರೇಡ್-2, ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಎಲೆಕ್ಟ್ರಿಕಲ್/ಫಿಟ್ಟರ್ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣ ಆಗಿರಬೇಕು.
ಹುದ್ದೆಗಳ ಸಂಖ್ಯೆ: ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಒಟ್ಟು 410 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಅಭಿಯಂತರ (ಸಿವಿಲ್)-89 ( ಮಾಸಿಕ ವೇತನ 33,450 ರೂ. – 62,600 ರೂ. ), ಕಿರಿಯ ಆರೋಗ್ಯ ನೀರಿಕ್ಷಕ-57, ಎಲೆಕ್ಟ್ರಿಷಿಯನ್ ಗ್ರೇಡ್1-2, ನೀರು ಸರಬರಾಜು ಆಪರೇಟರ್-89 ( ಮಾಸಿಕ ವೇತನ 23,500 ರೂ. – 47,650 ರೂ.), ಎಲೆಕ್ಟ್ರಿಷಿಯನ್ ಗ್ರೇಡ್2-10, ಸಹಾಯಕ ನೀರು ಸರಬರಾಜು ಆಪರೇಟರ್-163 ( ಮಾಸಿಕ ವೇತನ 21,400 ರೂ. – 42,200 ರೂ.).
ಡಿಜಿ ಮಲೆನಾಡು.ಕಾಂ | ಜಾಹಿರಾತು ಮೊಬೈಲ್ ಸಂಖ್ಯೆ: 9449422942
ಇ-ಮೇಲ್ : digimalenadu@gmail.com
ಅರ್ಜಿ ಶುಲ್ಕ, ವಿಧಾನ, ಕಡೇ ದಿನಾಂಕ: 2022ರ ಏಪ್ರಿಲ್ 29ರವರೆಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾಹಿತಿಗೆ ವೆಬ್‌ಸೈಟ್ ವೀಕ್ಷಿಸಿ: https://kpsc.kar.nic.in/ . ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ., ಉಳಿದ ಅಭ್ಯರ್ಥಿಗಳಿಗೆ 300 ರೂ. ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿದೆ. ಇದರೊಂದಿಗೆ ಎಲ್ಲ ಅಭ್ಯರ್ಥಿಗಳು 35 ರೂ. ಪ್ರಕ್ರಿಯೆ ಶುಲ್ಕ ಪಾವತಿಸಬೇಕು.
ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ನೇಮಕಾತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಫೇಸ್‌ಬುಕ್ ಪೇಜ್ : ಉದ್ಯೋಗ ಜಗತ್ತು Job World : www.facebook.com/jobworldkarnataka ಪ್ರತಿ ದಿನ ನಿರಂತರವಾಗಿ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮುಖ ಲಿಂಕ್: ಅರ್ಹತಾ ಷರತ್ತುಗಳು, ಆಯ್ಕೆ ವಿಧಾನ, ಸ್ಪರ್ಧಾತ್ಮಕ ಪರೀಕ್ಷಾ ವಿಧಾನ, ಪಠ್ಯಕ್ರಮ, ವಯೋಮಿತಿ ಹಾಗೂ ಉದ್ಯೋಗ ನೇಮಕಾತಿ ಪ್ರಕಟಣೆಯ ಲಿಂಕ್‌ಗಾಗಿ ಕ್ಲಿಕ್ ಮಾಡಿ: https://kpsc.kar.nic.in/Notification%20DEPT%20OF%20MUNICIPAL%20ADMN%2019-3-2022..pdf