ಮೈಸೂರು ಪೇಯಿಂಟ್ಸ್‌ನಲ್ಲಿ ಉದ್ಯೋಗ ಅವಕಾಶ, ಎಂ.ಎಸ್ಸಿ, ಎಂಬಿಎ, ಬಿ.ಎಸ್ಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಏ. 18ರವರೆಗೆ ಅವಕಾಶ

ಮೈಸೂರು ಪೇಯಿಂಟ್ಸ್‌ನಲ್ಲಿ ಉದ್ಯೋಗ ಅವಕಾಶ, ಎಂ.ಎಸ್ಸಿ, ಎಂಬಿಎ, ಬಿ.ಎಸ್ಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಏ. 18ರವರೆಗೆ ಅವಕಾಶ

ಉದ್ಯೋಗ ಜಗತ್ತು Job World | 9 ಏಪ್ರಿಲ್‌ 2022 | ಡಿಜಿ ಮಲೆನಾಡು.ಕಾಂ

ಕರ್ನಾಟಕ ಸರ್ಕಾರದ ಅಧೀನ ಉದ್ಯಮ ಮೈಸೂರು ಪೇಯಿಂಟ್ಸ್‌ ಮತ್ತು ವಾರ್ನಿಷ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ ಗ್ರೂಪ್‌ ಎ, ಬಿ, ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿ, ಕ್ರೀಡೆ ಮತ್ತು ಸಿನಿಮಾ ಕುರಿತ ಸುದ್ದಿ ನೀಡುವ ಫೇಸ್‌ಬುಕ್‌ ಪೇಜ್‌ : ಡಿಜಿ ಮಲೆನಾಡು : www.facebook.com/digimalenadu

ಹುದ್ದೆಗಳ ಸಂಖ್ಯೆ: ಮೈಸೂರು ಪೇಯಿಂಟ್ಸ್‌ ಮತ್ತು ವಾರ್ನಿಷ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ)(56,800 ರೂ.-80,100 ರೂ.), ಲೆಕ್ಕಪತ್ರ ವ್ಯವಸ್ಥಾಪಕ(42.000 ರೂ.-72,500 ರೂ.), ಮಾರಾಟ ಅಧಿಕಾರಿ(22,400 ರೂ.-53,900 ರೂ.), ಸಹಾಯಕ ಕಾರ್ಯ ವ್ಯವಸ್ಥಾಪಕ(20,900 ರೂ.-51,400ರೂ.), ಸಿನಿಯರ್‌ ಕೆಮಿಸ್ಟ್‌ (20,900 ರೂ.-51,400 ರೂ.) ಹುದ್ದೆಗಳಿಗೆ ತಲಾ ಒಬ್ಬರಂತೆ ನೇಮಕಾತಿ ನಡೆಯಲಿದೆ. ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಹುದ್ದೆಗೆ ಅಭ್ಯರ್ಥಿಯು ಪೇಯಿಂಟ್‌ ಟೆಕ್ನಾಲಜಿಯಲ್ಲಿ ಎಂ.ಎಸ್ಸಿ, ಲೆಕ್ಕಪತ್ರ ವ್ಯವಸ್ಥಾಪಕ ಹುದ್ದೆಗೆ ಎಂಬಿಎ ಫೈನಾನ್ಸ್‌, ಮಾರಾಟ ಅಧಿಕಾರಿ ಹುದ್ದೆಗೆ ಐದು ವರ್ಷದ ವೃತ್ತಿ ಅನುಭವ ಜತೆಯಲ್ಲಿ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೋಮಾ, ಸಹಾಯಕ ಕಾರ್ಯ ವ್ಯವಸ್ಥಾಪಕ ಹುದ್ದೆಗೆ ಕೆಮಿಸ್ಟ್ರಿಯಲ್ಲಿ ಬಿ.ಎಸ್ಸಿ ಹಾಗೂ ಸಿನಿಯರ್‌ ಕೆಮಿಸ್ಟ್‌ ಹುದ್ದೆಗೆ ವೃತ್ತಿ ಅನುಭವದ ಜತೆಯಲ್ಲಿ ಬಿ.ಎಸ್ಸಿ ಕೆಮಿಸ್ಟ್ರಿ ಅಧ್ಯಯನ ಪೂರ್ಣಗೊಳಿಸಿರಬೇಕು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಅರ್ಜಿ ವಿಧಾನ, ಕಡೇ ದಿನಾಂಕ: ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಏ. 18ರವರೆಗೂ ಅವಕಾಶ ಇರಲಿದೆ.

ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ನೇಮಕಾತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಫೇಸ್‌ಬುಕ್‌ ಪೇಜ್‌ : ಉದ್ಯೋಗ ಜಗತ್ತು Job World : www.facebook.com/jobworldkarnataka  

ಪ್ರತಿ ದಿನ ನಿರಂತರವಾಗಿ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ ಅರ್ಹತಾ ಷರತ್ತು, ವಯೋಮಿತಿ, ಆಯ್ಕೆ ವಿಧಾನ, ನೇಮಕಾತಿ ಅಧಿಸೂಚನೆ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ನಮೂನೆಗೆ ಕ್ಲಿಕ್‌ ಮಾಡಿ: https://mysorepaints.karnataka.gov.in/storage/pdf-files/%E0%B2%A8%E0%B3%87%E0%B2%AE%E0%B2%95%E0%B2%BE%E0%B2%A4%E0%B2%BF%20%E0%B2%85%E0%B2%A7%E0%B2%BF%E0%B2%B8%E0%B3%82%E0%B2%9A%E0%B2%A8%E0%B3%86%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%85%E0%B2%B0%E0%B3%8D%E0%B2%9C%E0%B2%BF%20%E0%B2%A8%E0%B2%AE%E0%B3%82%E0%B2%A8%E0%B3%86%20%E0%B2%B8%E0%B2%82%E0%B2%96%E0%B3%8D%E0%B2%AF%E0%B3%86%202126.pdf

digimalenadu

ಶಿವಮೊಗ್ಗ
error: Content is protected !!