ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಅಕ್ಟೋಬರ್ 21, 22, 23ಕ್ಕೆ ಜಿಲ್ಲಾ ವಿಚಾರ ಸಂಕಿರಣ, ನೂತನ ದತ್ತಿಗಳ ವಿಶೇಷ ಉಪನ್ಯಾಸ ಮಾಲೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಅಕ್ಟೋಬರ್ 21, 22, 23ಕ್ಕೆ ಜಿಲ್ಲಾ ವಿಚಾರ ಸಂಕಿರಣ, ನೂತನ ದತ್ತಿಗಳ ವಿಶೇಷ ಉಪನ್ಯಾಸ ಮಾಲೆ

ಶಿವಮೊಗ್ಗ | 19 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಅಕ್ಟೋಬರ್‌ 21ರಿಂದ ಮೂರು ದಿನಗಳ ಕಾಲ ವಿಚಾರ ಸಂಕಿರಣ ಹಾಗೂ ನೂತನ ದತ್ತಿಗಳ ವಿಶೇಷ ಉಪನ್ಯಾಸ ಮಾಲೆ ಏರ್ಪಡಿಸಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಎನ್‌.ಮಹಾರುದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಬಸವಕೇಂದ್ರದ ಡಾ.  ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ಟೋಬರ್‌ 21ರಂದು ಸಂಜೆ 6ಕ್ಕೆ ಶ್ರೀ ನಂಜಪ್ಪ ಶರಣ ಸಾಹಿತ್ಯ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ “ಮೌಲಿಕ ಬದುಕು” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು. ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ನಂಜಪ್ಪ ಆಸ್ಪತ್ರೆಯ ಡಿ.ಜಿ.ಬೆನಕಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಅಕ್ಟೋಬರ್‌ 22ರಂದು ಸಂಜೆ 6ಕ್ಕೆ ಶ್ರೀಮತಿ ನಾಗರತ್ನಮ್ಮ ಶ್ರೀ ವೈ.ಆರ್.ಪರಮೇಶ್ವರಪ್ಪ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರು “ನೀನೂ ಇಲ್ಲ, ನಾನೂ ಇಲ್ಲ” ವಿಷಯ ಕುರಿತು ಉಪನ್ಯಾಸ ನೀಡುವರು. ಉದ್ಯಮಿ ವೈ.ಪಿ.ಶಿವಕುಮಾರ್‌, ಕೈಗಾರಿಕೋದ್ಯಮಿ ಎಸ್.ಆರ್.ಹರ್ಷ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಜನಪದ ಗಾಯಕ ಕೆ.ಯುವರಾಜ ಅವರಿಗೆ ಅಕ್ಟೋಬರ್‌ 22ರ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆ.ಆರ್.ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.

ಅಕ್ಟೋಬರ್‌ 23ರಂದು ಸಂಜೆ 6ಕ್ಕೆ ಶ್ರೀಮತಿ ಶಕುಂತಲ ಶ್ರೀ ಎಸ್.ರುದ್ರೇಗೌಡರ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರು “ಮರಣವೇ ಮಹಾನವಮಿ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯೆ ಪ್ರೊ. ಕಿರಣ್‌ ದೇಸಾಯಿ, ಕೈಗಾರಿಕೋದ್ಯಮಿ ಡಿ.ಎಸ್.ಚಂದ್ರಶೇಖರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪ್ರತಿ ದಿನ ಸಂಜೆ 6ಕ್ಕೆ ವಚನ ಗಾಯನ ಇರಲಿದ್ದು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ವತಿಯಿಂದ ವಚನ ಗಾಯನ ನಡೆಸಿಕೊಡಲಿದೆ. ಪ್ರತಿ ದಿನ ಉಪನ್ಯಾಸದ ನಂತರ 15 ನಿಮಿಷ ಪ್ರಶ್ನೋತ್ತರ ಇರಲಿದೆ ಎಂದರು.

ಕೈಗಾರಿಕೋದ್ಯಮಿ ಡಿ.ಎಸ್.ಚಂದ್ರಶೇಖರ್‌, ಎಸ್‌.ಆರ್.ಹರ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಆರ್.ಎಸ್‌.ಸ್ವಾಮಿ, ನಂಜಪ್ಪ ಆಸ್ಪತ್ರೆಯ ಅಮೃತ್‌, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್‌, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟೀಲ್‌ ಸುದ್ದಿಗೋಷ್ಠಿಯಲ್ಲಿದ್ದರು.

digimalenadu

ಶಿವಮೊಗ್ಗ
error: Content is protected !!