ಚಿತ್ರಕಲೆ, ಮೊಬೈಲ್ ಛಾಯಾಗ್ರಹಣ, ಕವಿತೆ ರಚನೆ, ಭಾಷಣ, ಸಂವಾದ, ಜಾನಪದ ನೃತ್ಯ ಸ್ಪರ್ಧೆ, ಅಕ್ಟೋಬರ್ 28ರ ಜಿಲ್ಲಾ ಮಟ್ಟದ ಯುವ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ, ನಗದು ಬಹುಮಾನ ಗೆಲ್ಲಿ

ಚಿತ್ರಕಲೆ, ಮೊಬೈಲ್ ಛಾಯಾಗ್ರಹಣ, ಕವಿತೆ ರಚನೆ, ಭಾಷಣ, ಸಂವಾದ, ಜಾನಪದ ನೃತ್ಯ ಸ್ಪರ್ಧೆ, ಅಕ್ಟೋಬರ್ 28ರ ಜಿಲ್ಲಾ ಮಟ್ಟದ ಯುವ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ, ನಗದು ಬಹುಮಾನ ಗೆಲ್ಲಿ

ಶಿವಮೊಗ್ಗ | 08 ಅಕ್ಟೋಬರ್‌ 2022 | ಡಿಜಿ ಮಲೆನಾಡು.ಕಾಂ

ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ ವಿಷಯ ಕುರಿತು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಅಕ್ಟೋಬರ್‌ 28ರಂದು ಜಿಲ್ಲಾ ಮಟ್ಟದ ಯುವ ಉತ್ಸವ 2022-23 ಕಾರ್ಯಕ್ರಮ ಆಯೋಜಿಸಲಾಗಿದೆ.

ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವ ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 28ರಂದು ಜಿಲ್ಲಾ ಯುವ ಉತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಯುವ ಜನತೆಯಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸುವ ಹಾಗೂ ಸ್ಪರ್ಧಾ ಮನೋಭಾವ ಸೃಜಿಸುವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷ ವಯೋಮಿತಿಯೊಳಗಿನ, ಶಿವಮೊಗ್ಗ ಜಿಲ್ಲೆಯಲ್ಲಿ ವಾಸವಿರುವ ಯುವಕ ಯುವತಿಯರು ಭಾಗವಹಿಸಬಹುದು.

ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು. ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ, ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ.

ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವುದು ಸರ್ಧಾ ಕಾರ್ಯಕ್ರಮದ ಉದ್ದೇಶ ಆಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಯುವ ಕಲಾವಿದರಿಗೆ ಚಿತ್ರಕಲೆ ಸ್ಪರ್ಧೆ, ಮೊಬೈಲ್ ಛಾಯಾಗ್ರಹಣ ಸ್ಪರ್ಧೆ, ಯುವ ಬರಹಗಾರರಿಗೆ ಕವಿತೆ ರಚನೆ ಮಾಡುವ ಸ್ಪರ್ಧೆ, ( ಕನ್ನಡ, ಹಿಂದಿ, ಇಂಗ್ಲೀಷ್‌ನಲ್ಲಿ ಕವಿತೆ ರಚಿಸಲು ಅವಕಾಶ), ಭಾಷಣ ಸ್ಪರ್ಧೆ, ( ಇಂಗ್ಲೀಷ್, ಹಿಂದಿ ಭಾಷೆಯಲ್ಲಿ 7 ನಿಮಿಷ ಮಾತನಾಡಲು ಅವಕಾಶ), ಇರಲಿದೆ.

ನಾಲ್ಕು ಸ್ಪರ್ಧೆಗಳಲ್ಲಿ 30 ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಇರಲಿದೆ. ಯುವ ಸಂವಾದ ಕಾರ್ಯಕ್ರಮದಲ್ಲಿ 100 ಯುವಜನರು ಭಾಗವಹಿಸಬಹುದು.  ಸಂವಾದವನ್ನು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಮಾತನಾಡಬಹುದು.

ಸಾಂಸ್ಕೃತಿಕ ಉತ್ಸವ – ಜಾನಪದ ನೃತ್ಯ : ಇದು ಗುಂಪು ಸ್ಪರ್ಧೆ ಆಗಿದ್ದು, ಜಿಲ್ಲೆಯ 10 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ತಂಡದಲ್ಲಿ 10 ಜನ ಇರಬೇಕು. 8 ನಿಮಿಷಗಳ ಕಾಲಾವಕಾಶ ನಿಗಧಿಪಡಿಸಿದೆ.

ಎಲ್ಲಾ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಒಬ್ಬರು ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಸರ್ಧಾ ಕಾರ್ಯಕ್ರಮದಲ್ಲಿ ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸುವ ತಂಡಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳಿಗೆ ಲಘು ಊಟ ಉಪಹಾರದ ವ್ಯವಸ್ಥೆ ಒದಗಿಸಲಾಗುತ್ತದೆ.

ಹೆಚ್ಚಿನ ವಿವರ ಹಾಗೂ ನೋಂದಣಿಗೆ ದೂರವಾಣಿ 08182220883, ಮೊ. 7975443499, ನೆಹರು ಯುವ ಕೇಂದ್ರ, ಶಿವಮೊಗ್ಗ ಸಂಪರ್ಕಿಸಬಹುದು. ನೋಂದಣಿ ಮಾಡಿದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು ವಿವರಗಳನ್ನು ಇ-ಮೇಲ್ [email protected] ಮೂಲಕ ಸಲ್ಲಿಸಿ ಅಕ್ಟೊಬರ್ 18ರೊಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ನೆಹರೂ ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

digimalenadu

ಶಿವಮೊಗ್ಗ
error: Content is protected !!