ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ | 06 ಅಕ್ಟೋಬರ್‌ 2022 | ಡಿಜಿ ಮಲೆನಾಡು.ಕಾಂ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿವಿಧ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಅರ್ಜಿ ಸಲ್ಲಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ ಪದವಿ ಮಟ್ಟದಲ್ಲಿ ಡಾ. ಎಸ್.ಕೆ. ಶಿವಕುಮಾರ್ ಪ್ರಶಸ್ತಿ ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಪ್ರೊ. ಯು.ಆರ್. ರಾವ್ ಪ್ರಶಸ್ತಿ ಹಾಗೂ ಜನಸಾಮಾನ್ಯರ ಆವಿಷ್ಕಾರಗಳಿಗೆ ಆವಿಷ್ಕಾರ/ನಾವೀನ್ಯತೆ ಪ್ರಶಸ್ತಿ ನೀಡಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅರ್ಜಿ ಆಹ್ವಾನಿಸಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಆಸಕ್ತರು ಅರ್ಜಿಯನ್ನು ಅಕ್ಟೋಬರ್‌ 31ರೊಳಗೆ [email protected] ಗೆ  ಇಮೇಲ್ ಕಳುಹಿಸಬೇಕು. ಪ್ರತಿಯನ್ನು “ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ. ಯು.ಆರ್.ರಾವ್ ವಿಜ್ಞಾನ ಭವನ, ತೋಟಗಾರಿಕೆ ವಿಜ್ಞಾನಗಳ ಕಾಲೇಜು ಮಹಾದ್ವಾರ, ಜಿ.ಕೆ.ವಿ.ಕೆ. ಆವರಣ, ಮೇಜರ್ ಸಂದೀಪ್ ಉನ್ನಿಕೃಷನ್ ರಸ್ತೆ, ವಿದ್ಯಾರಣ್ಯಪುರ, ಬೆಂಗಳೂರು 560097 ಗೆ ಕಳುಹಿಸಬೇಕು.

ಡಾ. ಎಸ್.ಕೆ. ಶಿವಕುಮಾರ್ ಪ್ರಶಸ್ತಿ , ಪ್ರೊ. ಯು.ಆರ್. ರಾವ್ ಪ್ರಶಸ್ತಿ ಹಾಗೂ ಜನಸಾಮಾನ್ಯರ ಆವಿಷ್ಕಾರಗಳಿಗೆ ಆವಿಷ್ಕಾರ/ನಾವೀನ್ಯತೆ ಪ್ರಶಸ್ತಿ ಕುರಿತ ಮಾಹಿತಿಗೆ ಅಕಾಡೆಮಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು ಅಥವಾ ದೂ.ಸಂ.: 080-29721550, ವೆಬ್‍ಸೈಟ್ https://kstacademy.in/en/ ಸಂಪರ್ಕಿಸಬಹುದಾಗಿದೆ.

digimalenadu

ಶಿವಮೊಗ್ಗ
error: Content is protected !!