ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2023, ಅರ್ಜಿ ಸಲ್ಲಿಕೆ ದಿನಾಂಕ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ

ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2023, ಅರ್ಜಿ ಸಲ್ಲಿಕೆ ದಿನಾಂಕ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ

ಶಿವಮೊಗ್ಗ | 14 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ರಾಷ್ಟ್ರೀಯ ಪರೀಕ್ಷೆ ಸಂಸ್ಥೆಯು 2023-24 ರ ಶೈಕ್ಷಣಿಕ ವರ್ಷಕ್ಕೆ 6 ಮತ್ತು 9 ನೇ ತರಗತಿ ಪ್ರವೇಶಕ್ಕೆ ದೇಶಾದ್ಯಂತ 33 ಸೈನಿಕ ಶಾಲೆಗಳಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2023 ( ಎಐಎಸ್‍ಎಸ್‍ಇಇ ) ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಸೈನಿಕ ಶಾಲೆಗಳು ಇಂಗ್ಲಿಷ್ ಮಾಧ್ಯಮ ಸಿಬಿಎಸ್‌ಇ ವಸತಿ ಶಾಲೆ ಆಗಿವೆ. ಸೈನಿಕ ಶಾಲಾ ಸೊಸೈಟಿಯಿಂದ ( ರಕ್ಷಣಾ ಸಚಿವಾಲಯದ ಅಡಿಯಲ್ಲಿ) ಕಾರ್ಯ ನಿರ್ವಹಿಸುತ್ತಿವೆ. 2023 ರ ಜನವರಿ 8 ರಂದು ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2023 ನಡೆಯಲಿದೆ. ಬಹು ಆಯ್ಕೆ ಪ್ರಶ್ನೆಗಳು ಇರಲಿದ್ದು, ಓಎಂಆರ್ ಶೀಟ್ ಆಧಾರಿತ ಮಾದರಿ ಪರೀಕ್ಷೆ ನಡೆಯಲಿದೆ. ಮಾಹಿತಿ ಕೈಪಿಡಿಯಲ್ಲಿ ಪರೀಕ್ಷೆ ನಡೆಯುವ ನಗರಗಳ ವಿವರ ಇದೆ.

6ನೇ ತರಗತಿ ಪ್ರವೇಶ ಪಡೆಯಲು 31-03-2023 ರಂತೆ 10 ಮತ್ತು 12 ವರ್ಷ, ಅಭ್ಯರ್ಥಿ 01 ಏಪ್ರಿಲ್ 2011 ಮತ್ತು 31 ಮಾರ್ಚ್ 2013 ರ ನಡುವೆ ಜನಿಸಿರಬೇಕು.  9ನೇ ತರಗತಿಗೆ ಪ್ರವೇಶ ಪಡೆಯಲು 31-03-2023 ರಂತೆ 13 ರಿಂದ 15 ವರ್ಷ, ಅಭ್ಯರ್ಥಿ 01 ಏಪ್ರಿಲ್ 2008 ಮತ್ತು 31 ಮಾರ್ಚ್ 2010 ರ ನಡುವೆ ಜನಿಸಿರಬೇಕು. ಪರೀಕ್ಷಾ ಶುಲ್ಕ ಎಸ್‍ಸಿ/ಎಸ್‍ಟಿ 500 ರೂ.,  ಸಾಮಾನ್ಯ/ಡಿಫೆನ್ಸ್‌/ಓಬಿಸಿ-ಎನ್‍ಸಿಎಲ್ ಗೆ 650 ರೂ. ಇರುತ್ತದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲಾವಧಿ, ಮಾಧ್ಯಮ, ಪರೀಕ್ಷೆಯ ಪಠ್ಯ ಕ್ರಮ, ಸೈನಿಕ ಶಾಲೆಗಳ, ಹೊಸ ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು ಪರೀಕ್ಷಾ ನಗರಗಳು, ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು ಇತ್ಯಾದಿಗಳನ್ನು ವೆಬ್‍ಸೈಟ್ ನಲ್ಲಿರುವ ಮಾಹಿತಿ ಕೈಪಿಡಿಯಲ್ಲಿ ನೋಡಬಹುದು. 2023 ರ ಪರೀಕ್ಷೆಗೆ ಪ್ರವೇಶ ಪಡೆಯಲು ಆನ್‍ಲೈನ್ https://aissee.nta.nic.in/ ಮೂಲಕ ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬೇಕು.

digimalenadu

ಶಿವಮೊಗ್ಗ
error: Content is protected !!