ಬಾರಿಸು ಕನ್ನಡ ಡಿಂಡಿಮವ ನೃತ್ಯ – ಗಾಯನ ಕಾರ್ಯಕ್ರಮ ನವೆಂಬರ್ 20ಕ್ಕೆ, ವಿಶೇಷ ಕಾರ್ಯಕ್ರಮಕ್ಕೆ ಪ್ರವೇಶ ಪಾಸ್ ಕಡ್ಡಾಯ, ಉಚಿತ ಪಾಸ್ ಗಳಿಗಾಗಿ ಸಂಪರ್ಕಿಸಲು ಲಿಂಕ್ ಕ್ಲಿಕ್ ಮಾಡಿ

ಬಾರಿಸು ಕನ್ನಡ ಡಿಂಡಿಮವ ನೃತ್ಯ – ಗಾಯನ ಕಾರ್ಯಕ್ರಮ ನವೆಂಬರ್ 20ಕ್ಕೆ, ವಿಶೇಷ ಕಾರ್ಯಕ್ರಮಕ್ಕೆ ಪ್ರವೇಶ ಪಾಸ್ ಕಡ್ಡಾಯ, ಉಚಿತ ಪಾಸ್ ಗಳಿಗಾಗಿ ಸಂಪರ್ಕಿಸಲು ಲಿಂಕ್ ಕ್ಲಿಕ್ ಮಾಡಿ

ಶಿವಮೊಗ್ಗ | 17 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ನವೆಂಬರ್ 20ರಂದು ಸಂಜೆ 5.30‌ ಕ್ಕೆ “ಬಾರಿಸು ಕನ್ನಡ ಡಿಂಡಿಮವ”ಕನ್ನಡ ಚಿತ್ರಗೀತೆಗಳ ವಿಶೇಷ ನೃತ್ಯ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಕನ್ನಡ ನಾಡು ನುಡಿಗೆ ಸಂಬಂಧಿಸಿ ವಿಶೇಷ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ. ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿರುವ ಒಡ್ಡಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೌಶಲ್ಯ ಶಾಲೆ ವಿದ್ಯಾರ್ಥಿಗಳು ಹಾಗೂ ಸಮನ್ವಯ ಸೇವಕರು ನೃತ್ಯ ಗಾಯನ ನಡೆಸಿಕೊಡಲಿದ್ದಾರೆ.

ಶೌರ್ಯ ಪ್ರಶಸ್ತಿ ವಿಜೇತೆ ಪ್ರಾರ್ಥನಾ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ಉದ್ಘಾಟಿಸುವರು. ಕೆನರಾ ಬ್ಯಾಂಕ್ ಶಿವಮೊಗ್ಗ ಉಪ ಮಹಾಪ್ರಬಂಧಕ ಸಂದೀಪ್ ರಾವ್, ಅಮೃತ್ ನೋನಿ ಸಂಸ್ಥೆಯ ಡಾ. ಎಂ.ಕೆ.ಶ್ರೀನಿವಾಸಮೂರ್ತಿ, ಕೆ ಲೈವ್ ಸಂಸ್ಥೆಯ ರಾಜೇಶ್ ಕೀಳಂಬಿ, ಕೆ ಎಸ್ ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ಅಧಿಕಾರಿ ರಾಚಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸುವರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳು, ಮಧುರ ಗೀತೆಗಳು, ಪುನೀತ್ ರಾಜ್ ಕುಮಾರ್ ಗೀತೆಗಳು, ಸ್ಫೂರ್ತಿದಾಯಕ ಗೀತೆಗಳು ಸೇರಿದಂತೆ ವಿಶೇಷ ರೀತಿಯ ಗೀತ ಗಾಯನ ಪ್ರಯತ್ನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಕಾರ್ಯಕ್ರಮದ ಉಚಿತ ಪಾಸ್ ಗಳಿಗಾಗಿ 9380233123 ಸಂಪರ್ಕಿಸಬಹುದಾಗಿದೆ.  ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಇರುತ್ತದೆ.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರತಿ ವರ್ಷ ಸಮನ್ವಯ ಟ್ರಸ್ಟ್‌ ನಿಂದ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಕಾರ್ಯಕ್ರಮ ರೂಪಿಸಲಾಗಿದೆ. 50ಕ್ಕೂ ಅಧಿಕ ವಿಶೇಷ ಗೀತೆಗಳ ಗಾಯನ ನಡೆಯಲಿದೆ.

digimalenadu

ಶಿವಮೊಗ್ಗ
error: Content is protected !!