ಹೊಸಗುಂದದಲ್ಲಿ ನವೆಂಬರ್‌ 21ಕ್ಕೆ ಹೊಸಗುಂದ ಉತ್ಸವ, ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನವಂಬರ್‌ 22ಕ್ಕೆ

ಹೊಸಗುಂದದಲ್ಲಿ ನವೆಂಬರ್‌ 21ಕ್ಕೆ ಹೊಸಗುಂದ ಉತ್ಸವ, ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನವಂಬರ್‌ 22ಕ್ಕೆ

ಸಾಗರ | 19 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯ ಮತ್ತು ಪರಿವಾರ ದೇವಾಲಯದ ಆವರಣದಲ್ಲಿ ನವೆಂಬರ್‌ 21 ಮತ್ತು 22ರಂದು ಎರಡು ದಿನಗಳ ಹೊಸಗುಂದ ಉತ್ಸವ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಹೊಸಗುಂದ ಉತ್ಸವ ಪ್ರಯುಕ್ತ ಎರಡು ದಿನ ವಿಶೇಷ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹೊಸಗುಂದದಲ್ಲಿ ಶ್ರೀ ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇವಸ್ಥಾನ, ಪರಿವಾರ ದೇವಾಲಯಗಳಾದ ಶ್ರೀ ಮಹಿಷ ಮರ್ಧಿನಿ, ಶ್ರೀ ವೀರಭದ್ರ, ಶ್ರೀ ಲಕ್ಷ್ಮೀ ಗಣಪತಿ, ಶ್ರೀ ಕಂಚಿ ಕಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ದೀಪೋತ್ಸವ ಇರಲಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿರುವ ಹೊಸಗುಂದ ಉತ್ಸವದಲ್ಲಿ ನವೆಂಬರ್‌ 21ರ ಸಂಜೆ 5.30ಕ್ಕೆ ಶ್ರೀ ಸದ್ಗುರು ಭಜನಾ ಮಂಡಳಿ ಸಾಗರ ಇವರಿಂದ ಭಜನಾ ಸೇವೆ, ನಿರ್ಮಲಾ ಸುರೇಶ್‌ ಸಂಗಡಿಗರಿಂದ ಶ್ರೀ ರಾಮ ನೃತ್ಯ ಸೇವೆ, ಕಲಾಸಿಂಚನ ಸಾಂಸ್ಕೃತಿಕ ವೇದಿಕೆ ಸಾಗರ ಇವರಿಂದ ಜಾನಪದ ಸಮೂಹ ಗಾಯನ ಸೇವೆ, ಪ್ರಣಮ್ಯ ಎಂ.ಜಂಬೆಕೊಪ್ಪ ಇವರಿಂದ ಭರತನಾಟ್ಯ ಸೇವೆ ಹಾಗೂ ಜಯಂತಿ ಹೆಗ್ಡೆ ಹಾಗೂ ಸಂಗಡಿಗರಿಂದ ಅಂಟಿಕೆ ಪಿಂಟಿಕೆ ಜಾನಪದ ಹಾಡು ಸೇವೆ ನಡೆಯಲಿದೆ.

ನವೆಂಬರ್‌ 22ರ ಸಂಜೆ 6 ಗಂಟೆಯಿಂದ ಶ್ರೀ ಉಮಾಮಹೇಶ್ವರನಿಗೆ ವೈಭವದ ಲಕ್ಷ ದೀಪೋತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಅನನ್ಯ ಅಶ್ವತ್ಥ್‌ ಹೆಗ್ಡೆ ಇವರಿಂದ ನೃತ್ಯ ಸೇವೆ, ಮಾರಿಕಾಂಬ ಯಕ್ಷಗಾನ ಮಂಡಳಿ ಹಾರೇಕೊಪ್ಪ ಇವರಿಂದ ಕಂಸವಧೆ ಯಕ್ಷಗಾನ ಸೇವೆ ನಡೆಯಲಿದೆ.

digimalenadu

ಶಿವಮೊಗ್ಗ
error: Content is protected !!