ಜೆಸಿಐ ವಲಯ ಅಧ್ಯಕ್ಷರಾಗಿ ಅನುಷ್ ಗೌಡ, ಉಪಾಧ್ಯಕ್ಷರಾಗಿ ಸತೀಶ್ ಚಂದ್ರ

ಜೆಸಿಐ ವಲಯ ಅಧ್ಯಕ್ಷರಾಗಿ ಅನುಷ್ ಗೌಡ, ಉಪಾಧ್ಯಕ್ಷರಾಗಿ ಸತೀಶ್ ಚಂದ್ರ

ಶಿವಮೊಗ್ಗ | 29 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಜೆಸಿಐ ವಲಯದ 2023ನೇ ಸಾಲಿನ ನೂತನ ವಲಯ ಅಧ್ಯಕ್ಷರಾಗಿ ಅನುಷ್ ಗೌಡ ಹಾಗೂ ವಲಯ ಉಪಾಧ್ಯಕ್ಷರಾಗಿ ಸತೀಶ್ ಚಂದ್ರ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಜೆಸಿಐ ಅಂತರಾಷ್ಟ್ರೀಯ ಸಂಸ್ಥೆಯ ವಲಯ 24ರ ವಲಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷರ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಿಂದ ಜಯಗಳಿಸಿ 2023 ನೇ ಸಾಲಿನ ವಲಯ ಅಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಜೆಸಿಐ ವಲಯದ 2023ನೇ ಸಾಲಿನ ನೂತನ ವಲಯ ಅಧ್ಯಕ್ಷ ಅನುಷ್ ಗೌಡ ಹಾಗೂ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ ಅವರಿಗೆ ಮಂಜುನಾಥ್ ಕದಂ, ಕಿಶೋರ್ ಕುಮಾರ್, ವಸಂತ ಹೋಬಳಿದಾರ್, ಜಿ.ವಿಜಯುಮಾರ್, ರವೀಂದ್ರನಾಥ ಐತಾಳ್, ಡಾ. ಗುಡದಪ್ಪ ಕಸಬಿ, ಸುರೇಂದ್ರ ಕೋಟ್ಯಾನ್, ಶೇಷಗಿರಿ ಡಿ ಕೆ, ಶುಭಂ ಹೋಟೆಲ್ ಮಾಲೀಕರಾದ ಚಂದ್ರಹಾಸ್ ಶೆಟ್ಟಿ, ಉದಯ  ಕದಂಬ, ಹರೀಶ್, ಈಶ್ವರ್, ಸಂತೋಷ್ ಕುಮಾರ್ ಹಾಗೂ ಜೆಸಿಐ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ, ಕಾರ್ಯದರ್ಶಿ ಡಾ. ಲಲಿತಾ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಜಿ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿ ಕುಮಾರಸ್ವಾಮಿ, ಎಲ್ಲಾ ಸದಸ್ಯರು ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಸಂಸ್ಥೆಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಿದೆ. ಮುಂದಿನ ವರ್ಷದಲ್ಲಿಯೂ ವಲಯ ಮಟ್ಟದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ನಡೆಸಲಿ ಎಂದು ಶುಭಕೋರಿದ್ದಾರೆ.

digimalenadu

ಶಿವಮೊಗ್ಗ
error: Content is protected !!