ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ, ಶ್ರೀಗಳ ಆರ್ಶೀವಾದ ಪಡೆದ ಸಹಸ್ರಾರು ಭಕ್ತರು

ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ, ಶ್ರೀಗಳ ಆರ್ಶೀವಾದ ಪಡೆದ ಸಹಸ್ರಾರು ಭಕ್ತರು

ಶಿವಮೊಗ್ಗ | 7 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಕಾಶಿ ಪೀಠದ ಜಂಗಮವಾಡಿ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆಯು ಶಾಸ್ತ್ರೋಕ್ತವಾಗಿ ನಡೆಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ವಿನೋಬಗರದ ಶ್ರೀ ಶಿವಾಲಯ ದೇವಸ್ಥಾನದ ಆವರಣದಲ್ಲಿ ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ 4ನೇ ವರ್ಷದ ಕಳಸಾರೋಹಣ ವಾರ್ಷಿಕೋತ್ಸವ ಕಾರ್ಯಕ್ರಮ ಪ್ರಯುಕ್ತ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮ‌ ನಡೆಯಿತು.

ಕಾಶಿ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆಯು ಯಶಸ್ವಿಯಾಗಿ ಜರುಗಿತು. ಸಾವಿರಾರು ಭಕ್ತರು ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಶಿ ಶ್ರೀ ಜಗದ್ಗುರುಗಳ ಆರ್ಶೀವಾದ ಪಡೆದರು.

ಪೂಜಾ ಕಾರ್ಯಕ್ರಮಕ್ಕೂ ಮುನ್ನ ಕಾಶಿ ಶ್ರೀ ಜಗದ್ಗುರುಗಳ ರಾಜಬೀದಿ ಉತ್ಸವ ನಡೆಯಿತು. ಜೈಲ್‌ ಆವರಣದಿಂದ ವಿನೋಬನಗರದ ಶ್ರೀ ಶಿವಾಲಯದವರೆಗೂ ಮಹಿಳೆಯರು ಪೂರ್ಣಕುಂಭ ಸಮೇತ ಮೆರವಣಿಗೆಯಲ್ಲಿ ಆಗಮಿಸಿದರು. ವೀರಗಾಸೆ ಕಲಾವಿದರು, ಡೊಳ್ಳು ತಂಡ, ವಿವಿಧ ವಾದ್ಯಗಾರರು ಪಾಲ್ಗೊಂಡಿದ್ದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಇದೇ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾಶಿ ಶ್ರೀ ಜಗದ್ಗುರುಗಳ ಆರ್ಶೀವಾದ ಪಡೆದರು. ಮಹಾಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.

ಕವಲೇದುರ್ಗ ಕೆಳದಿ ರಾಜಗುರು ಮಹಾಸಂಸ್ಥಾನ ಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಎಸ್.ಮುರುಗೇಶ್‌ ಕೂಸನೂರು, ಸಹ ಕಾರ್ಯದರ್ಶಿ ಮಹೇಶಮೂರ್ತಿ ಸಿ.ಹುಂಬಿ, ಪ್ರಧಾನ ಅರ್ಚಕ ಎಚ್.ಎಂ.ರುದ್ರಯ್ಯ ಶಾಸ್ತ್ರಿ, ಉಮೇಶ ಹಿರೇಮಠ, ಟಿ.ಎನ್.ಮಂಜಪ್ಪ, ಎ.ಎಂ.ಚಂದ್ರಯ್ಯ, ಕೆ.ವಿರೇಶ್‌, ಸಿ.ಆರ್.ನಂದಿಬಸಪ್ಪ, ಜಿ.ಎಸ್.ಮಲ್ಲಿಕಾರ್ಜುನ, ಹೆಚ್.ಕೆ.ಚಂದ್ರೇಗೌಡ, ಡಿ.ಆರ್.ಪುಟ್ಟಪ್ಪ, ಕೆ.ಕೊಟ್ರಪ್ಪ, ಎಸ್.ನಾಗರಾಜಯ್ಯ, ಎಂ.ಎನ್.ಪುನೀತ್‌, ಕೆ.ಸಂಪತ್‌ಕುಮಾರ್‌, ಎಚ್.ಎಂ.ವಿನಯ ಶಾಸ್ತ್ರಿ ಹಾಜರಿದ್ದರು.

digimalenadu

ಶಿವಮೊಗ್ಗ
error: Content is protected !!