ಶ್ರೀ ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನವೆಂಬರ್‌ 7ಕ್ಕೆ, ಚತುರ್ಥ ಕಳಸಾರೋಹಣ ವಾರ್ಷಿಕೋತ್ಸವ, ಧರ್ಮ ಜಾಗೃತಿ ಸಮಾರಂಭ

ಶ್ರೀ ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನವೆಂಬರ್‌ 7ಕ್ಕೆ, ಚತುರ್ಥ ಕಳಸಾರೋಹಣ ವಾರ್ಷಿಕೋತ್ಸವ, ಧರ್ಮ ಜಾಗೃತಿ ಸಮಾರಂಭ

ಶಿವಮೊಗ್ಗ | 2 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ವಿನೋಬಗರದ ಶ್ರೀ ಶಿವಾಲಯ ದೇವಸ್ಥಾನದಲ್ಲಿ ನವೆಂಬರ್‌ 7ಕ್ಕೆ ಶ್ರೀ ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ, ಚತುರ್ಥ ಕಳಸಾರೋಹಣ ವಾರ್ಷಿಕೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಸಹ ಕಾರ್ಯದರ್ಶಿ ಮಹೇಶಮೂರ್ತಿ ಸಿ.ಹುಂಬಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ವಿನೋಬಗರದ ಶ್ರೀ ಶಿವಾಲಯ ದೇವಸ್ಥಾನದಲ್ಲಿನವೆಂಬರ್‌ 7ರ ಬೆಳಗ್ಗೆ 8.30ಕ್ಕೆ ಕಾಶಿ ಪೀಠದ ಜಂಗಮವಾಡಿ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕವಲೇದುರ್ಗ ಕೆಳದಿ ರಾಜಗುರು ಮಹಾಸಂಸ್ಥಾನ ಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಪ್ರಧಾನ ಅರ್ಚಕ ಎಚ್.ಎಂ.ರುದ್ರಯ್ಯ ಶಾಸ್ತ್ರಿ ಮಾತನಾಡಿ, ನವೆಂಬರ್‌ 7ರ ಸಂಜೆ 6ಕ್ಕೆ ಶ್ರೀ ಶಿವಾಲಯ ದೇವಸ್ಥಾನ ಆವರಣದಲ್ಲಿ ಕಾಶಿ ಪೀಠದ ಜಂಗಮವಾಡಿ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠ ಶ್ರೀ ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉಪಸ್ಥಿತರಿರುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ಉದ್ಘಾಟಿಸುವರು. ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು. ಪಾಲಿಕೆ ಸದಸ್ಯರು ಸೇರಿದಂತೆ ಪ್ರಮುಖರು ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದರು.

ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ಎಸ್.ಮುರುಗೇಶ್‌ ಕೂಸನೂರು ಮಾತನಾಡಿ, ಶ್ರೀ ಕಾಶಿ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ದಾಸೋಹ ಇರಲಿದೆ. ಕಾಶಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಪ್ರಮುಖರಾದ ಉಮೇಶ ಹಿರೇಮಠ, ಟಿ.ಎನ್.ಮಂಜಪ್ಪ, ಎ.ಎಂ.ಚಂದ್ರಯ್ಯ, ಸಿ.ಆರ್.ನಂದಿಬಸಪ್ಪ, ಕೆ.ವಿರೇಶ್‌, ಜಿ.ಎಸ್.ಮಲ್ಲಿಕಾರ್ಜುನ, ಹೆಚ್.ಕೆ.ಚಂದ್ರೇಗೌಡ, ಎಸ್.ನಾಗರಾಜಯ್ಯ, ಎಂ.ಎನ್.ಪುನೀತ್‌ ಸುದ್ದಿಗೋಷ್ಠಿಯಲ್ಲಿದ್ದರು.

digimalenadu

ಶಿವಮೊಗ್ಗ
error: Content is protected !!