ರೋಬೋಟಿಕ್‌ ಸರ್ಜಿಕಲ್‌ ಸಿಸ್ಟಮ್‌ ವ್ಯವಸ್ಥೆ ಲೋಕಾರ್ಪಣೆ

ರೋಬೋಟಿಕ್‌ ಸರ್ಜಿಕಲ್‌ ಸಿಸ್ಟಮ್‌ ವ್ಯವಸ್ಥೆ ಲೋಕಾರ್ಪಣೆ

ಶಿವಮೊಗ್ಗ | 28 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಆಧುನಿಕ ತಂತ್ರಜ್ಞಾನದ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್‌ ಸಿಸ್ಟಮ್‌ ವ್ಯವಸ್ಥೆಯಿಂದ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ನಗರದ ಮಾಚೇನಹಳ್ಳಿಯಲ್ಲಿರುವ ಎನ್ ಯು ಆಸ್ಪತ್ರೆಯಲ್ಲಿ ಪ್ರಥಮ ವರ್ಸಿಯಸ್ ರೋಬೋಟಿಕ್ ಆಪರೇಷನ್ ಸಿಸ್ಟಮ್ ವ್ಯವಸ್ಥೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರೋಬೋಟಿಕ್ ಸರ್ಜಿಕಲ್ ಸಿಸ್ಟಮ್‌  ವ್ಯವಸ್ಥೆಯಿಂದ ಕಡಿಮೆ ಗಾಯದ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಗಲಿದೆ. ಈವರೆಗೂ ಚಿಕಿತ್ಸೆ ಪಡೆಯಲು ಬೆಂಗಳೂರು ಅಥವಾ ಮಂಗಳೂರಿಗೆ ರೋಗಿಗಳು ಹೋಗಬೇಕಿತ್ತು. ಆದರೆ ಈಗ ಶಿವಮೊಗ್ಗದಲ್ಲಿ ಸೌಲಭ್ಯ ಸಿಕ್ಕಿರುವುದು ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಎನ್‌ ಯು ಆಸ್ಪತ್ರೆಯ ಎಂಡಿ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, 2020ರಲ್ಲಿ ಮಾಚೇನಹಳ್ಳಿಯಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಎನ್ ಯು ಆಸ್ಪತ್ರೆ ನೆಫ್ರೋ-ಯೂರಾಲಜಿಯಲ್ಲಿ ವಿಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ರೋಬೋಟಿಕ್ ಸರ್ಜಿಕಲ್‌ ಆಪರೇಷನ್ ಸಿಸ್ಟಮ್ ರಾಜ್ಯದಲ್ಲಿ ಮೂರನೆಯದು ಎಂದರು.

ರೋಬೋಟಿಕ್ ಆಪರೇಷನ್ ಎಂದರೆ ಯಂತ್ರವೇ ಸ್ವತಃ ಮಾಡುವುದಿಲ್ಲ. ವೈದ್ಯರ ನಿರ್ದೇಶನದಂತೆ ರೋಬೋಟ್ ಕಾರ್ಯ ನಿರ್ವಹಿಸುತ್ತದೆ. ರೋಬೋಟಿಕ್ ಶಸ್ತ್ರ ಚಿಕಿತ್ಸೆಯಿಂದ ರೋಗಿಗಳಿಗೆ ಕಡಿಮೆ ನೋವು, ಸಣ್ಣಗಾಯ ಮತ್ತು ಶೀಘ್ರ ಚೇತರಿಕೆ ಆಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆಸ್ಪತ್ರೆಯ ವೈದ್ಯರಾದ ಡಾ. ಪ್ರವೀಣ್, ಡಾ. ಕಾವ್ಯ, ಡಾ. ಕೃಷ್ಣಪ್ರಸಾದ್, ಡಾ. ಕಾರ್ತಿಕ್, ಡಾ. ಪ್ರದೀಪ್, ಡಾ. ಡಾ. ರಾಮಚಂದ್ರ, ಪ್ರಮುಖರಾದ ದಿವ್ಯಾ, ಪಿಆರ್‌ಒ ಶ್ರುತಿ ರಾವ್ ಇದ್ದರು.

digimalenadu

ಶಿವಮೊಗ್ಗ
error: Content is protected !!