ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಸಾಂಸ್ಕೃತಿಕ ಚಾಂಪಿಯನ್

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಸಾಂಸ್ಕೃತಿಕ ಚಾಂಪಿಯನ್

ಶಿವಮೊಗ್ಗ | 3 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ತೀರ್ಥಹಳ್ಳಿ ತಾಲೂಕಿನ ಗೋಪಾಲಗೌಡ ರಂಗಮಂದಿರದಲ್ಲಿ ರೋಟರಿ ಜಿಲ್ಲೆ 3182ರ ವಲಯ 10-11ರ ವಲಯ ಮಟ್ಟದ ಸಾಂಸ್ಕೃತಿಕ ಸಂಗಮದ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಮೂಹ ಗಾಯನದಲ್ಲಿ ಪ್ರಥಮ ಸ್ಥಾನ, ಯುಗಳ ಗೀತೆಯಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಹಾಗೂ ಸಮೂಹ ನೃತ್ಯದಲ್ಲಿ ದ್ವೀತಿಯ ಸ್ಥಾನ ಗಳಿಸಿದೆ. ಕಿರು ಪ್ರಹಸನದಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿದೆ. ನವೆಂಬರ್ 6ರಂದು ದಕ್ಷಿಣ ಕನ್ನಡದ ನಿಟ್ಟೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಭಾಗವಹಿಸಲಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ವಲಯ ಮಟ್ಟದ ಸಾಂಸ್ಕೃತಿಕ ಚಾಂಪಿಯನ್ ಆದ ರೋಟರಿ ಶಿವಮೊಗ್ಗ ಪೂರ್ವ ತಂಡಕ್ಕೆ ಸನ್ಮಾನಿಸಲಾಯಿತು. ವಲಯ 10ರ ಸಹಾಯಕ ಗವರ್ನರ್ ಸುನೀತಾ ಶ್ರೀಧರ್, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಸಾಂಸ್ಕೃತಿಕ ವಲಯ ಸಂಯೋಜಕ ಎ.ಎಸ್.ಗುರುರಾಜ್, ಡಾ. ರಮೇಶ್, ಮನೋಜ್‌ಕುಮಾರ್, ಸಾಂಸ್ಕೃತಿಕ ಸಮಿತಿಯ ಭರತ್, ವಲಯ ಸೇನಾನಿ ಕಿರಣ್, ವಿಜೇತರಿಗೆ ಪ್ರಶಸ್ತಿ ಪತ್ರ ಪಾರಿತೋಷಕ ನೀಡಿ ಗೌರವಿಸಿದರು.

ಮಾಜಿ ಜಿಲ್ಲಾಗವರ್ನರ್ ಎಚ್.ಎಲ್.ರವಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ಡಾ. ಪರಮೇಶ್ವರ ಶಿಗ್ಗಾವ್, ಕುಮಾರಸ್ವಾಮಿ, ಪ್ರತಾಪ್, ಕೆ.ಬಿ.ರವಿಶಂಕರ್, ಹುಲಿರಾಜ್ ಗುಬ್ಬಿ, ಬಿಂದು ವಿಜಯಕುಮಾರ್, ರೂಪಾ ಗುಡದಪ್ಪ, ಉಷಾ ಪರಮೇಶ್ವರ್, ರಮಾ, ಎಂ.ಪಿ.ನಾಗರಾಜ್, ಶೈಲಜಾ, ಸತೀಶ್ ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!