ಮತದಾರರ ಕರಡುಪಟ್ಟಿ ಪ್ರಕಟ, ತಿದ್ದುಪಡಿ ಇದ್ದಲ್ಲಿ ಡಿಸೆಂಬರ್ 8ರೊಳಗೆ ಸರಿಪಡಿಸಿಕೊಳ್ಳಲು ಸೂಚನೆ

ಮತದಾರರ ಕರಡುಪಟ್ಟಿ ಪ್ರಕಟ, ತಿದ್ದುಪಡಿ ಇದ್ದಲ್ಲಿ ಡಿಸೆಂಬರ್ 8ರೊಳಗೆ ಸರಿಪಡಿಸಿಕೊಳ್ಳಲು ಸೂಚನೆ

ಶಿವಮೊಗ್ಗ | 15 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಜಿಲ್ಲಾ ಚುನಾವಣಾ ಶಾಖೆಯು ನವೆಂಬರ್ 11ರಂದು ಕರಡು ಮತದಾರರ ಪಟ್ಟಿ‌ ಪ್ರಕಟಿಸಿದ್ದು, ಮತದಾರರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಡಿಸೆಂಬರ್‌ 8ರವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಮತದಾರರು ಹಾಗೂ ಹೊಸ ಸೇರ್ಪಡೆ, ಮತದಾರ ಮರಣ ಹೊಂದಿದ್ದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲು, ಹಾಲಿ ಇರುವ ಮತದಾರ ಸ್ಥಳಾಂತರಗೊಂಡಿದ್ದಲ್ಲಿ, ಹೆಸರು, ವಿಳಾಸ ತಿದ್ದುಪಡಿ ಮಾಡಲು ನವೆಂಬರ್ 9 ರಿಂದ ಡಿಸೆಂಬರ್ 8ರವರೆಗೆ ಆಯಾ ಮತಗಟ್ಟೆ ಅಧಿಕಾರಿ ಅಥವಾ ಸಂಬಂಧಪಟ್ಟ ತಾಲೂಕು ಕಚೇರಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮತದಾರರು ಚುನಾವಣಾ ಶಾಖೆಯ ಜಾಲತಾಣ http://www.nvsp.in ಮತ್ತು http://voterportal.eci.gov.in ಹಾಗೂ ಸಹಾಯವಾಣಿ voter helpline App ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 20 (ಭಾನುವಾರ), 2022ರ ಡಿಸೆಂಬರ್ 3 (ಶನಿವಾರ), ಡಿಸೆಂಬರ್ 4 (ಭಾನುವಾರ) ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹ ನಾಗರೀಕರು ಹಾಗೂ 18 ರಿಂದ 19 ವಯೋಮಾನದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ ಸಂಬಂಧಪಟ್ಟ ಬಿ.ಎಲ್.ಓ.ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲೆಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!