ಶಿವಮೊಗ್ಗ ವಿಷನ್ 2050 ಪರಿಕಲ್ಪನೆಯ ಅಭಿವೃದ್ಧಿಗೆ ಎಲ್ಲರ ಕೊಡುಗೆ ಮುಖ್ಯ
ಶಿವಮೊಗ್ಗ | 9 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ಜಿಲ್ಲಾ ವಿತರಕರ ಸಂಘವು ತುಂಬಾ ಕ್ರಿಯಾಶೀಲವಾಗಿದ್ದು, ಕೋವಿಡ್ ಕಾಲದಲ್ಲೂ ಮಾಡಿದ ಕಾರ್ಯ ಶ್ಲಾಘನೀಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 2050 ರಲ್ಲಿ ಶಿವಮೊಗ್ಗ ಎಂಬ ಕಲ್ಪನೆಗೆ ವಿತರಕರು ಕೂಡ ಮುಂದಾಲೋಚನೆ ಮಾಡಿ ವ್ಯವಹರಿಸಬೇಕು. ಆನ್ ಲೈನ್ ವ್ಯಾಪಾರದ ಪೈಪೋಟಿಯಲ್ಲಿ ನೀವೂ ಕೂಡ ಬೆಳೆಯಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್ ಮಾತನಾಡಿ, ಸಂಘವು ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಯೋಜಿತ ಸಂಘಗಳಲ್ಲಿ ಮುಂಚೂಣಿಯಲ್ಲಿದೆ. ಇದೇ ರೀತಿ ಮುಂದೆಯೂ ಸಾಗಬೇಕು ಎಂದು ಆಶಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ವಿನೋಬ ನಗರ ಬ್ರಾಂಚ್ ಮ್ಯಾನೇಜರ್ ಉತ್ಸವ್ ಚಕ್ರವರ್ತಿ ಮತ್ತು ಅವರ ತಂಡ ವಿತರಕರಿಗೆ ಬ್ಯಾಂಕ್ ನಲ್ಲಿ ಸಿಗುವ ಹಲವು ಬಗೆಯ ಸಾಲ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷರಾದ ಶಿವರಾಜ್ ಉಡುಗಣಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದಿಂದ ಲಭ್ಯ ಆಗಿರುವ ಈ ಕಚೇರಿಯಿಂದ ಉತ್ತಮ ಕೆಲಸಗಳನ್ನು ಮಾಡಲು ಅನುಕೂಲ ಆಗಲಿದೆ. ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸದಸ್ಯರ ಸಹಕಾರದಿಂದ ಹಿಂದೆ ನಗರದ ವರ್ತಕರಿಗಾಗಿ ಉತ್ಸವ್ 2020 ಮತ್ತು ಹಲವಾರು ಕಾರ್ಯಕ್ರಮ ಮಾಡಿದ್ದೆವು. ಮುಂದೆಯೂ ಕೂಡ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಕಾರ್ಯದರ್ಶಿ ಮೋಹನ್, ಉಪಾಧ್ಯಕ್ಷ ಬದರಿನಾಥ, ಸಹ ಕಾರ್ಯದರ್ಶಿ ದೇವರಾಜ್ ಎಂ ಸಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸುಲೈಮಾನ್, ನವೀನ್ ಜವಳಿ, ಎ.ಎನ್.ಪ್ರಕಾಶ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
|| ಇದನ್ನೂ ಓದಿ || ಶಿವಮೊಗ್ಗ ನಗರ ಹೇಗಿದೆ ?, ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ https://digimalenadu.com/2022/12/shivamogga-city-public-opinion-survey/
|| ಇದನ್ನೂ ಓದಿ || ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗ ಮೇಳ ಡಿಸೆಂಬರ್ 13ಕ್ಕೆ https://digimalenadu.com/2022/12/udyoga-mela-at-sahyadri-college-december-13/
|| ಇದನ್ನೂ ಓದಿ || ಸದೃಢ ದೇಶ ನಿರ್ಮಾಣ ಮಾಡಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ https://digimalenadu.com/2022/12/public-perception-survey-styani-chess-master/
|| ಇದನ್ನೂ ಓದಿ || “ಶ್ರೀ ವಾದಿರಾಜರ ತೀರ್ಥಪ್ರಬಂಧ” ಸಂಶೋಧನಾ ಗ್ರಂಥ ಲೋಕಾರ್ಪಣೆ ಡಿಸೆಂಬರ್ 10ಕ್ಕೆ, ಲೇಖಕಿ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಅವರ ಕೃತಿ https://digimalenadu.com/2022/12/dr-mythreyi-adithya-prasad-book-release/