ತೆರಿಗೆ ಇಲಾಖೆ ಕಾಯ್ದೆಗಳಲ್ಲಿ ಆಗುವ ಬದಲಾವಣೆಗಳ ಅರಿವು ಅವಶ್ಯಕ

ತೆರಿಗೆ ಇಲಾಖೆ ಕಾಯ್ದೆಗಳಲ್ಲಿ ಆಗುವ ಬದಲಾವಣೆಗಳ ಅರಿವು ಅವಶ್ಯಕ

ಶಿವಮೊಗ್ಗ | 6 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಉದ್ದಿಮೆದಾರರಿಗೆ ತೆರಿಗೆ ಇಲಾಖೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಉದ್ದಿಮೆದಾರರಿಗೆ ಗೊಂದಲಗಳಿದ್ದಲ್ಲಿ ಸರಿಪಡಿಸಿಕೊಂಡು ಮುನ್ನಡೆಯುವ ಬಗ್ಗೆ ಅಗತ್ಯ ಸಲಹೆಗಳನ್ನು ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ, ಶಿವಮೊಗ್ಗ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘ, ಶಿವಮೊಗ್ಗ ಜಿಲ್ಲಾ ತೆರಿಗೆದಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ “ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಇತ್ತೀಚಿನ ಬದಲಾವಣೆಗಳು” ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ದೇಶಾದ್ಯಂತ ಇರುವ ಉದ್ಯಮಿಗಳ ಕೊಡುಗೆಯು ಅಪಾರ. ಭಾರತ ದೇಶವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನ ಪಟ್ಟಿಯಲ್ಲಿ ಸ್ಥಾನ ಪಡೆಯುವತ್ತ ಸದೃಢವಾಗಿ ಮುನ್ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಕ್ಷೇತ್ರಕ್ಕೆ ಸರ್ಕಾರ ಅತ್ಯಂತ ಹೆಚ್ಚಿನ ಅನುದಾನ ವಿನಿಯೋಗಿಸುತ್ತಿದೆ. ತೆರಿಗೆ ಪಾವತಿಸುತ್ತಿರುವ ಎಲ್ಲ ಉದ್ಯಮಿಗಳ ಕೊಡುಗೆಯು ಪ್ರಮುಖವಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಆರ್.ವಸಂತ್‌ಕುಮಾರ್ ಮಾತನಾಡಿ, ತೆರಿಗೆದಾರರಿಗೆ ಕಾಯ್ದೆಗಳಲ್ಲಿ ಆಗಿರುವ ತಿದ್ದುಪಡಿಗಳ ಮಾಹಿತಿ ನೀಡುವುದು ಇಲಾಖೆ ಜವಾಬ್ದಾರಿ. ಆದಾಯ ತೆರಿಗೆ ಇಲಾಖೆಯು ನಿರಂತರವಾಗಿ ಜಾಗೃತಿ ಕಾರ್ಯಾಗಾರ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಇದರಿಂದ ತೆರಿಗೆದಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿವಮೊಗ್ಗ ಜಿಲ್ಲಾ ತೆರಿಗೆದಾರರ ಸಂಘದ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ತೆರಿಗೆ ಇಲಾಖೆಯಲ್ಲಿ ಆಗುತ್ತಿರುವ ತಿದ್ದುಪಡಿಗಳ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ಅವಶ್ಯಕ. ಇತ್ತೀಚಿನ ತಿದ್ದುಪಡಿಗಳಿಂದ ತೆರಿಗೆದಾರರಲ್ಲಿ ಗೊಂದಲ ಸಹಜವಾಗಿ ಉಂಟಾಗಿದೆ. ಆದ್ದರಿಂದ ತೆರಿಗೆ ಇಲಾಖೆಯಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ತಿಳವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ಲೆಕ್ಕ ಪರಿಶೋಧಕ ಶರತ್ ಮಾತನಾಡಿ, ದೇಶದ ಪ್ರತಿಯೊಬ್ಬ ತೆರಿಗೆದಾರರು ಸಕಾಲದಲ್ಲಿ ತೆರಿಗೆ ಪಾವತಿ ಮಾಡಬೇಕು. ದಂಡ ಕಟ್ಟುವ ಸಮಯದವರೆಗೂ ಹೋಗಬಾರದು. ತೆರಿಗೆ ಕಾಯ್ದೆಗಳಲ್ಲಿ ಮಾರ್ಪಾಡು ಆದಲ್ಲಿ ಕೂಡಲೇ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು.

ಆದಾಯ ತೆರಿಗೆ ಇಲಾಖೆ ಕಾಯ್ದೆಯಲ್ಲಿ ಆಗಿರುವ ಬದಲಾವಣೆ, ತಿದ್ದುಪಡಿಯ ಮಾಹಿತಿ ಬಗ್ಗೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಲಾಯಿತು. ಲೆಕ್ಕ ಪರಿಶೋಧಕ ಶರತ್, ಶ್ರೀರಾಮ್ ವಿಶೇಷ ಉಪನ್ಯಾಸ ನೀಡಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿ ರಾಘವೇಂದ್ರ, ಗುರುಪ್ರಸಾದ್, ವಾಗೀಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಖಜಾಂಚಿ ಮಧುಸೂದನ್ ಐತಾಳ್, ತೆರಿಗೆ ಸಲಹಾ ಸಮಿತಿ ಚೇರ್ಮನ್ ಇ.ಪರಮೇಶ್ವರ್, ನಿರ್ದೇಶಕ ಗಣೇಶ ಎಂ.ಅಂಗಡಿ, ರಮೇಶ್ ಹೆಗ್ಡೆ, ಪ್ರದೀಪ್ ಯಲಿ, ಹಾಲಸ್ವಾಮಿ, ಎಂ.ರಾಜು, ಮರಿಸ್ವಾಮಿ, ದೇವೆಂದ್ರ ನಾಯ್ಕ, ಜೆ.ಆರ್.ವಾಸುದೇವ್, ಶ್ರೀನಿವಾಸ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!