ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಗೋಮಾತೆಗೆ ಸೇವಾ ಸಮರ್ಪಣೆ
ಶಿವಮೊಗ್ಗ | 27 ಜನವರಿ 2023 | ಡಿಜಿ ಮಲೆನಾಡು.ಕಾಂ
ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ಸೇವೆಯಾಗಿ ಸಾಗರ ತಾಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಭಕ್ತರು ನೀಡಿದ್ದ ಒಣ ಹುಲ್ಲನ್ನು ಗೋಪೂಜೆ ನಂತರ ಗೋಮಾತೆಗೆ ಒಣ ಹುಲ್ಲನ್ನು ಸಮರ್ಪಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ದೇವಾಲಯದ ಧರ್ಮದರ್ಶಿ ಸಿ.ಎಂ.ನಾರಾಯಣ ಶಾಸ್ತ್ರೀ ಮಾತನಾಡಿ, ರಾಜ್ಯದ ಬೆಂಗಳೂರು, ಹಾಸನ, ಮೈಸೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಶಿಕಾರಿಪುರ ಹಾಗೂ ಇತರ ಪ್ರದೇಶಗಳಿಂದ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ತೆಗೆದುಕೊಳ್ಳಲು ಸೇವೆಯಾಗಿ ನೀಡಿದ್ದಾರೆ. ಸಾಗರ ತಾಲ್ಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಮೂನ್ನೂರಕ್ಕೂ ಹೆಚ್ಚು ಭಕ್ತರು ಹಾಗೂ ಶಿಕಾರಿಪುರದ ಭಕ್ತರು ಒಣ ಹುಲ್ಲನ್ನು ಸೇವೆಯಾಗಿ ಹುಲ್ಲಿನ ರೂಪದಲ್ಲಿ ನೀಡಿದ್ದಾರೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಅವರು ಭಕ್ತರ ಕುರಿತು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು. ಗೋಶಾಲೆಯಲ್ಲಿ ಇರುವ ಶಿವದಾಸ ಹಾಗೂ ಗೋವುಗಳಿಗೆ ಒಣ ಹುಲ್ಲನ್ನು ಭಕ್ತರು ಸಮರ್ಪಣೆ ಮಾಡಿದರು. ನಂತರ ದೇವಾಲಯದಲ್ಲಿ ಗೋಪೂಜೆಗೆ ಬಂದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಶ್ರೀ ಉಮಾ ಮಹೇಶ್ವರ ದೇವಾಲಯದ ಅರ್ಚಕ ವಿಜಯ್ ವಿಠಲ ಹೆಬ್ಬಾರ್, ಉಮಾಮಹೇಶ್ವರ ಹೆಗಡೆ, ಐಗಿನ ಬೈಲು ದಿನೇಶ್, ಗಣಪತಿ ಶೆಟ್ಟಿ, ಕೆ.ಟಿ.ರಮೇಶ್, ಶ್ರೀಧರ ಜೋಯಿಸ್, ಶ್ರೀ ರಕ್ಷಾ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu