ಹೃದಯ ವೈಫಲ್ಯ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಅವಶ್ಯ
ಶಿವಮೊಗ್ಗ | 13 ಜನವರಿ 2023 | ಡಿಜಿ ಮಲೆನಾಡು.ಕಾಂ
ಹೃದಯ ವೈಫಲ್ಯ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಅವಶ್ಯ. ತಪಾಸಣೆ ಮಾಡಿ ಪತ್ತೆ ಹಚ್ಚುವುದರಿಂದ ಅಪಾಯಕಾರಿ ರೋಗವನ್ನು ತಪ್ಪಿಸಬಹುದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಎನ್.ಎಸ್.ದೇವಾನಂದ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಕವಾಟುಗಳಿಗೆ ರೋಗಗಳಿಂದ ಆಗುವ ಪರಿಣಾಮ, ಸೋಂಕುಗಳು, ಹೃದಯದ ಸ್ನಾಯುಗಳ ರೋಗ, ಕೊರೊನರಿ ಆರ್ಟರಿ ರೋಗಗಳು, ಹೃದಯ ಸ್ತಂಭನ ಅಥವಾ ವಯಸ್ಸಾಗುವಿಕೆ ಹೃದಯ ವೈಫಲಕ್ಕೆ ಕಾರಣವಾಗಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದಿಂದ ಪ್ರತಿ ತಿಂಗಳು 20 ರಿಂದ 30 ರೋಗಿಗಳನ್ನು ವಿವಿಧ ಹೃದಯ ಪರಿಸ್ಥಿತಿಗಳೊಂದಿಗೆ ನೋಡುತ್ತೇವೆ. ಹೆಚ್ಚಿನ ಸಮಯಗಳಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿ ಮತ್ತು ಚಿಕಿತ್ಸೆ ನೀಡುವವರೆಗೆ ಹೃದಯ ವೈಫಲ್ಯತೆ ಸಾಧ್ಯತೆ ಬಗ್ಗೆ ತಿಳಿದಿರುವುದಿಲ್ಲ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಹೃದಯ ವೈಫಲ್ಯತೆ ನಿರ್ವಹಣೆ ಮಾಡಲು ಅನೇಕ ವಿಧಾನಗಳಿದ್ದು, ಹೃದಯ ಸಮಸ್ಯೆಯ ಲಕ್ಷಣವಿರುವ ಹೆಚ್ಚಿನ ಪ್ರಮಾಣದ ರೋಗಿಗಳನ್ನು ಜೀವನಶೈಲಿಯ ಮಾರ್ಪಾಡು, ಸೂಕ್ತ ಆಹಾರ ಪದ್ದತಿ ಹೊಂದಾಣಿಕೆ ಮತ್ತು ಔಷಧಿ ಮೂಲಕ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu