ಶಿವಮೊಗ್ಗ ಜಿಲ್ಲೆಯು ಕರ್ನಾಟಕ ಸಾಹಿತ್ಯ ಲೋಕದ ರಾಜಧಾನಿ
ಶಿವಮೊಗ್ಗ | 3 ಜನವರಿ 2023 | ಡಿಜಿ ಮಲೆನಾಡು.ಕಾಂ
ಅತ್ಯಂತ ಅದ್ಭುತ ಚೇತನಗಳನ್ನು ಪಡೆದ ಶಿವಮೊಗ್ಗ ಜಿಲ್ಲೆಯ ನೆಲ ಕರ್ನಾಟಕದ ಸಾಹಿತ್ಯಿಕ ರಾಜಧಾನಿ ಆಗಿದೆ ಎಂದು ವಾಗ್ಮಿ ಪ್ರೊ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಉಪನ್ಯಾಸ ಸರಣಿಯ ಎಂಟನೇ ಮಾಲಿಕೆಯಲ್ಲಿ ‘ಗುಣಾತ್ಮಕ ಜೀವನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಂಪಾದನೆಯ ಹಿಂದೆ ಹೋಗಿ ಬಹುತೇಕರು ಗುಣಾತ್ಮಕ ಜೀವನವನ್ನು ಕಳೆದು ಕೊಂಡಿದ್ದೇವೆ. ಗುಣಾತ್ಮಕ ಜೀವನ ಬೆಳೆಯುವುದು ಹೊಟ್ಟೆ ಕಿಚ್ಚಿನಿಂದಲ್ಲ, ಇನ್ನೊಬ್ಬರನ್ನು ನೆಮ್ಮದಿಯಾಗಿ ಬದುಕುವಂತೆ ಮಾಡುವುದರಿಂದ ಎಂದು ತಿಳಿಸಿದರು.
ಓಟದ ಜೀವನ ಅವಶ್ಯಕವಿಲ್ಲ. ಬದುಕನ್ನು ಆನಂದದಿಂದ ಅನುಭವಿಸೋಣ. ಅಂತಹ ಅನುಭವಿ ಜೀವನಕ್ಕೆ ಸ್ಲೋ ಲೀವಿಂಗ್ ಎನ್ನುವ ಚಳುವಳಿ ಹೆಚ್ಚಾಗಬೇಕಿದೆ. ಶ್ರೀಮಂತಿಕೆ ಹೆಚ್ಚಾದಂತೆ ಆತಂಕದ ಕ್ಷಣಗಳು ಹೆಚ್ಚಾಗುತ್ತಿದೆ. ನಮ್ಮ ಪೂರ್ವಿಕರಿಗೆ ಬಡತನವೆಂಬುದೇ ತಿಳಿದಿರಲಿಲ್ಲ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ ರಮೇಶ್, ನಿರ್ದೇಶಕ ಮೈಲಾರಪ್ಪ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಮಧುರಾವ್ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu