ಮುಗಿಲೆತ್ತರಕ್ಕೆ ಮಲೆನಾಡು ಸಂಭ್ರಮದ ಕಾರ್ಯಕ್ರಮ ಫೆಬ್ರವರಿ 25ಕ್ಕೆ, ನಟಿ ಆಶಾ ಭಟ್‌, ಶ್ವೇತಾ ಪ್ರಸಾದ್‌ ಭಾಗಿ

ಮುಗಿಲೆತ್ತರಕ್ಕೆ ಮಲೆನಾಡು ಸಂಭ್ರಮದ ಕಾರ್ಯಕ್ರಮ ಫೆಬ್ರವರಿ 25ಕ್ಕೆ, ನಟಿ ಆಶಾ ಭಟ್‌, ಶ್ವೇತಾ ಪ್ರಸಾದ್‌ ಭಾಗಿ

ಶಿವಮೊಗ್ಗ | 24 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಫ್ಲೈ ಶಿವಮೊಗ್ಗ ತಂಡವು ಫೆಬ್ರವರಿ 25ರಂದು ಸಂಜೆ 4ಕ್ಕೆ ವಿಶೇಷ ಸಂಭ್ರಮ ಆಚರಣೆ ಕಾರ್ಯಕ್ರಮ ಆಯೋಜಿಸಿದೆ ಎಂದು ತಂಡದ ಸಂಚಾಲಕ ಹರಿಕೃಷ್ಣ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗದಲ್ಲಿ ನಮ್ಮೆಲ್ಲರ ಕನಸಿನ ವಿಮಾನ ನಿಲ್ದಾಣ ಸ್ಥಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಗಾಳಿಪಟ ಉತ್ಸವ, ಸಂಗೀತ ಸಂಜೆ, ಬೆಳಕಿನ ಹಬ್ಬ ಸೇರಿದಂತೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು, ನಾಡಿನ ಹೆಸರಾಂತ ಕಲಾವಿದರು, ಸಂಗೀತ ಕಲಾವಿದರು ಹಾಗೂ ಗಾಯಕರು ವಿಮಾನ ನಿಲ್ದಾಣ ಆರಂಭದ ಸಂಭ್ರಮ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪೆಬ್ರವರಿ 25ರ ಸಂಜೆ 4ಕ್ಕೆ ಗಾಳಿಪಟ ಉತ್ಸವ ಆರಂಭಗೊಳ್ಳಲಿದ್ದು, ಶಿವಮೊಗ್ಗ ಜಿಲ್ಲೆಯ ಜನತೆ ಪಾಲ್ಗೊಳ್ಳಬಹುದಾಗಿದೆ. ಗಾಳಿಪಟ ಸಂಭ್ರಮದ ನಂತರ ಸಂಗೀತ ಸಂಜೆ ನಡೆಯಲಿದ್ದು, ನಟಿ ಆಶಾ ಭಟ್‌, ಶ್ವೇತಾ ಪ್ರಸಾದ್‌ ಸೇರಿದಂತೆ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ವಿಮಾನ ನಿಲ್ದಾಣ ಆರಂಭದ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಂಭ್ರಮ ಆಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಗಣ್ಯರು, ಕಲಾವಿದರು ಪಾಲ್ಗೊಳ್ಳುವ ನೀರಿಕ್ಷೆಯಿದೆ ಎಂದು ತಿಳಿಸಿದರು. ಪ್ರಮುಖರಾದ ಗಣೇಶ್‌, ಪ್ರಕಾಶ್‌, ವಿಜಯ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/shivamogganews

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!