ಕೆರೆ ಕಟ್ಟೆಗಳ ನಿರ್ಮಾಣದಂತಹ ಕೆಲಸ ಅತ್ಯಂತ ಪೂರಕ
ಶಿವಮೊಗ್ಗ | 13 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ಪ್ರಸ್ತುತ ನಾವು ಕೆರೆ ಕಟ್ಟೆಗಳನ್ನು ಉಳಿಸುವುದೇ ದೊಡ್ಡ ಯಾಗ ಯಜ್ಞವಾಗಿದೆ. ಪಂಚಭೂತಗಳನ್ನು ಸುಸ್ಥಿರವಾಗಿಡುವುದೇ ನಾವು ಮಾಡುವ ಯಜ್ಞ. ಕೆರೆಗಳಿಗೆ ಮರುಜೀವ ಕೊಟ್ಟರೆ ಅದು ನಮ್ಮೆಲ್ಲರ ಆಸ್ತಿಯಾಗುತ್ತದೆ, ಅಂತರ್ಜಲ ವೃದ್ಧಿ ಆಗುತ್ತದೆ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಬಿದರೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ಸರ್ಜಿ ಫೌಂಡೇಷನ್, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಹಾಗೂ ಪರಿಸರಾಸಕ್ತರ ನೆರವಿನ ವತಿಯಿಂದ ಆಯೋಜಿಸಿದ್ದ ನೂತನ ಕೆರೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಶಿವಮೊಗ್ಗಕ್ಕೆ ಪರಿಸರ ಪ್ರೇಮಿಗಳ ಕೊಡುಗೆ ಬಹು ದೊಡ್ಡದಿದೆ. ಮನುಷ್ಯ ಬಾಳಬೇಕಾದರೆ ಪರಿಸರ ಉಳಿಸುವುದು, ನೀರಿನ ಸಂಗ್ರಹಣೆ ತುಂಬಾ ಅಗತ್ಯವಿದೆ. ಕರ್ನಾಟಕದಲ್ಲಿ ನೀರಿನ ಲೆವೆಲ್ 4 ರಿಂದ 5 ಮೀಟರ್‌ಗೆ ಬಂದಿದೆ, 4 ಸಾವಿರ ಬಿಲಿಯನ್ ಕ್ಯೂಬಿಕ್ ಮೀಟರ್ ಮಳೆಯಿಂದ ಲಭ್ಯವಾಗುತ್ತದೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ನೀರು ವಿವಿಧ ಕೆರೆ, ಕಟ್ಟೆ, ಜಲಾಶಯ ಸೇರಿದಂತೆ ನೀರು ಸಂಗ್ರಹವಾಗುತ್ತದೆ ಎಂದು ಹೇಳಿದರು.
ಉಳಿದ ನೀರು ಸಮುದ್ರದ ಪಾಲು ಆಗುತ್ತದೆ. ಭೂಮಿಯು ನೀರನ್ನು ಹೀರಿಕೊಂಡಷ್ಟು ನೀರಿನ ಸೆಲೆ ಹೆಚ್ಚಾಗುತ್ತ ಹೋಗುತ್ತದೆ. ಇಲ್ಲವಾದರೆ ಭೂಕುಸಿತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ನೀರಿನ ಸಂಗ್ರಹ ಮತ್ತು ನೀರನ್ನು ಉಳಿಸುವಲ್ಲಿ ಕೆರೆ ಕಟ್ಟೆಗಳು ಅಭಿವೃದ್ಧಿ ಅತಿ ಮುಖ್ಯ ಎಂದು ತಿಳಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕಾರ್ಯಕ್ರಮಕ್ಕೂ ಮೊದಲು ಕೆರೆಯಲ್ಲಿ ಗಂಗಾ ಪೂಜೆಯನ್ನು ಡಾ. ಧನಂಜಯ ಸರ್ಜಿ ಮತ್ತು ನಮಿತಾ ಸರ್ಜಿ ದಂಪತಿ ನೀರನ್ನು ಕೆರೆಗೆ ಸಮರ್ಪಿಸುವ ಮೂಲಕ ಕೆರೆಯನ್ನು ಲೋಕಾರ್ಪಣೆ ಮಾಡಿದರು. ರಂಗಭೂಮಿ ಯೇಸು ಪ್ರಕಾಶ್ ಅವರಿಗೆ ಸರ್ಜಿ ಫೌಂಡೇಶನ್ ವತಿಯಿಂದ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್, ಪ್ರೊ. ಬಿ.ಎಂ.ಕುಮಾರ ಸ್ವಾಮಿ, ತ್ಯಾಗರಾಜ್ ಮಿತ್ಯಾಂತ, ಬಾಲುನಾಯ್ಡು, ಎಂ.ಶಂಕರ್, ಎಸ್.ಎಸ್.ಜ್ಯೋತಿ ಪ್ರಕಾಶ್, ಅಶೋಕ್‌ಭಟ್, ಡಾ. ಬಾಲಕೃಷ್ಣ ಹೆಗಡೆ, ದಿನೇಶ್ ಹಾಗೂ ಸಾಯಿಬಾಬಾ ಮಂದಿರದ ಸಮಿತಿ ಪ್ರಮುಖರು, ಪದಾಧಿಕಾರಿಗಳು ಹಾಜರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu