ಶಿವಮೊಗ್ಗದ ಜೆ ಎನ್ ಎನ್ ಸಿ ಇ ವಿಟಿಯು ಫೆಸ್ಟ್ ನಲ್ಲಿ ರನ್ನರ್‌ ಅಪ್

ಶಿವಮೊಗ್ಗದ ಜೆ ಎನ್ ಎನ್ ಸಿ ಇ ವಿಟಿಯು ಫೆಸ್ಟ್ ನಲ್ಲಿ ರನ್ನರ್‌ ಅಪ್

ಶಿವಮೊಗ್ಗ | 6 ಏಪ್ರಿಲ್ 2023 | ಡಿಜಿ ಮಲೆನಾಡು.ಕಾಂ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ‌ ವತಿಯಿಂದ ಚಿಕ್ಕಬಳ್ಳಾಪುರದ ಎಂ ಸಿ ಇ ಟಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ‘ವಿಟಿಯು ಫೆಸ್ಟ್ ಸಾಂಸ್ಕೃತಿಕ ಯುವೋತ್ಸವ 2023’ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಜೆ ಎನ್ ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವ ಮೂಲಕ 2 ಚಿನ್ನ, 2 ಬೆಳ್ಳಿ, 5 ಕಂಚಿನ ಪದಕ ಪಡೆದು 3 ನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ, ಜಾನಪದ‌ ಆರ್ಕೆಸ್ಟ್ರಾ ಸ್ಪರ್ಧೆಯಲ್ಲಿ ಎರಡನೇ‌ ಬಹುಮಾನ,‌ ಕೊಲಾಜ್‌ ಸ್ಪರ್ಧೆಯಲ್ಲಿ ಎರಡನೇ ಬಹುಮಾನ, ತಾಳ‌ ವಾದ್ಯದಲ್ಲಿ‌‌ ಮೂರನೇ ಸ್ಥಾನ ಗಳಿಸಿದ್ದಾರೆ.

ಚಿತ್ರಕಲಾ‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ರಂಗೋಲಿ ಸ್ಪರ್ಧೆಯಲ್ಲಿ ಮೂರನೇ ಸ್ಥಾನ,  ಕ್ಲೆ‌ ಮಾಡಲಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.  ಕಾಲೇಜಿನ ವಿವಿಧ ವಿಭಾಗಗಳ ಮೂವತ್ತೈದು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಮಧುಸೂದನ್ ಗೊಲ್ಲ,‌ ಅಕ್ಷತಾ, ಹರೀಶ್, ಡಾ. ಸುಭದ್ರಾ‌ ವಿದ್ಯಾರ್ಥಿಗಳ ತಂಡಗಳನ್ನು ಸಂಯೋಜಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ‌ಆಡಳಿತ ಮಂಡಳಿ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿ ‌ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!