ಚುನಾವಣಾ ಅಕ್ರಮ ತಡೆಯಲು ‘ಸಿ ವಿಜಿಲ್’ ಆ್ಯಪ್, ದೂರು ನೀಡಲು 1950 ಉಚಿತ ಸಹಾಯವಾಣಿ
ಶಿವಮೊಗ್ಗ | 8 ಏಪ್ರಿಲ್ 2023 | ಡಿಜಿ ಮಲೆನಾಡು.ಕಾಂ
ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ ವಿಜಿಲ್ (cVIGIL) ಆ್ಯಪ್ ಬಿಡುಗಡೆ ಮಾಡಿದೆ. ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳು ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಸಿವಿಜಿಲ್ ಆ್ಯಪ್ ಬಿಡುಗಡೆಗೊಳಿಸಲಾಗಿದೆ. ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಅಕ್ರಮವನ್ನು ಮೊಬೈಲ್‍ಗಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡುವ ಭರವಸೆಯನ್ನು ಆಯೋಗ ನೀಡಿದೆ ಎಂದು ತಿಳಿಸಿದರು.
ಚುನಾವಣಾ ಸಮಯದಲ್ಲಿ ಮತದಾರರು ನಿರ್ಧಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯಲ್ಲಿ ಆಮಿಷ ನೀಡಬಹುದಾದ ಹಣ ವಿತರಣೆ, ಉಡುಗೊರೆ, ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿ ಇಲ್ಲದ ಪೋಸ್ಟರ್ ಮತ್ತು ಬ್ಯಾನರ್, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣ, ಸಂದೇಶಗಳು, ಮತಗಟ್ಟೆಯ 200 ಮೀ. ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನದ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿವಿಜಿಲ್ ಆ್ಯಪ್‍ನಲ್ಲಿ ದೂರು ದಾಖಲಿಸಬಹುದು ಎಂದರು.
ಸ್ಮಾರ್ಟ್ ಫೋನ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿ ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಅತ್ಯಂತ ಸುಲಭವಾಗಿ ಬಳಸಬಹುದಾಗಿದೆ. ಅಕ್ರಮದ ಕುರಿತಾದ ಫೋಟೋ ಅಥವಾ ವಿಡಿಯೋ ಗಳನ್ನು ಅಪ್‍ಲೋಡ್ ಮಾಡಿ ದೂರು ನೀಡಬಹುದು. ಸ್ವವಿವರ ನೀಡಿಯಾದರೂ, ಅಥವಾ ನೀಡದೆಯೂ ದೂರು ನೀಡಬಹುದು. ಆ್ಯಪ್ ನಲ್ಲಿ ತಿಳಿಸಿದ 16 ರೀತಿಯ ದೂರುಗಳ ಪೈಕಿ ಒಂದನ್ನು ಸೆಲೆಕ್ಟ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಸಿವಿಜಿಲ್‍ನಲ್ಲಿ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಮುಕ್ತಾಯ ಆಗುವವರೆಗೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವರು. ದೂರು ಬಂದ ಕೂಡಲೇ ಪರಿಶೀಲಿಸಿ, ಸದರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ಹಾಗೂ ಮಾಹಿತಿಯನ್ನು ರವಾನಿಸಲಾಗುತ್ತದೆ.
ಮಾಹಿತಿ ಆಧಾರದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಂಡು ಗರಿಷ್ಟ 100 ನಿಮಿಷದ ಒಳಗೆ ದೂರನ್ನು ಇತ್ಯರ್ಥಪಡಿಸುವರು. ಸಾರ್ವಜನಿಕರು ಸಿವಿಜಿಲ್ ಮಾತ್ರವಲ್ಲದೇ ಉಚಿತ ಸಹಾಯವಾಣಿ 1950 ಕ್ಕೆ ಸಹ ಚುನಾವಣಾ ಅಕ್ರಮಗಳ ಕುರಿತು ದೂರು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu