ಶಿಕ್ಷಣದ ಜತೆಯಲ್ಲಿ ಉದ್ಯಮದ ಕೌಶಲ್ಯ ಮುಖ್ಯ
ಶಿವಮೊಗ್ಗ | 28 ಮೇ 2023 | ಡಿಜಿ ಮಲೆನಾಡು.ಕಾಂ
ಜ್ಞಾನ ಪಡೆಯುವ ಜತೆಯಲ್ಲಿ ಉದ್ಯಮಶೀಲತೆ ಹಾಗೂ ಕೌಶಲ್ಯದ ಬಗ್ಗೆ ಹೆಚ್ಚಿನ ತಿಳವಳಿಕೆ ಹೊಂದಬೇಕು. ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಅರೇಕಾ ಟೀ ಸಂಸ್ಥಾಪಕ ನಿವೇದನ್ ನೆಂಪೆ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಪಿಇಎಸ್ ಪಾಲಿಟೆಕ್ನಿಕ್ ವಾರ್ಷಿಕೋತ್ಸವ “ಸಂಭ್ರಮ-2023” ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ವರ್ಗದ ಜನರೊಂದಿಗೂ ಸಂವಹನ ನಡೆಸಬೇಕು. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕು. ಇದರಿಂದ ಸಮಸ್ಯೆಯನ್ನು ಆಳವಾಗಿ ಅರಿತು ತಕ್ಕ ಪರಿಹಾರವನ್ನು ಹುಡುಕಬಹುದು ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್ ಆಡಳಿತ ಮುಖ್ಯಾಧಿಕಾರಿ ಡಾ. ನಾಗರಾಜ ಆರ್ ಮಾತನಾಡಿ, ಕಾಲೇಜಿನ ಎಲ್ಲ ವಿಭಾಗದಲ್ಲೂ ಪ್ರವೇಶಾತಿ ಭರ್ತಿಯಾಗಿದ್ದು, ಹೊಸ ವಿಭಾಗಗಳಾಗಿ ಅರ್ಟಿಫಿಶಿಯಲ್ ಇಂಟಲಿಜೆನ್ಸಿ, ಕಂಪ್ಯೂಟರ್ ಇಂಜಿನಿಯರಿಂಗ್, ಪ್ರವಾಸೋದ್ಯಮ ಮತ್ತು ಪ್ರಯಾಣ ಮ್ಯಾನೇಜ್ಮೆಂಟ್ ಕೋರ್ಸ್ ಸೇರ್ಪಡಿಸಲಾಗಿದೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕಾಲೇಜಿನ ಪ್ರಾಚಾರ್ಯ ಪ್ರೊ. ಗೌತಮ್ ಜೆ ಕೆ, ಮಾಲಾ ಟಿ ಎಲ್, ಸುಜಯ್ ಎಂ.ವಿ., ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu