ನರೇಗಾ ಯೋಜನೆಯಡಿ ಪಿಳ್ಳಂಗೆರೆ ಕಲ್ಯಾಣಿ ಪುನಶ್ಚೇತನ ಕಾರ್ಯ
ಶಿವಮೊಗ್ಗ | 25 ಮೇ 2023 | ಡಿಜಿ ಮಲೆನಾಡು.ಕಾಂ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆ ಗ್ರಾಮದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿರುವ ಕಲ್ಯಾಣಿಯು ಪುನಶ್ಚೇತನಗೊಂಡು ಸುಂದರವಾಗಿ ರೂಪುಗೊಂಡಿದೆ. ಮಳೆಗಾಲದಲ್ಲಿ ಕಲ್ಯಾಣಿ ಭರ್ತಿ ವೇಳೆಯಲ್ಲಿ ಗುಡ್ಡದ ಸುತ್ತಮುತ್ತ ಹಸಿರಿನಿಂದ ಕೂಡಿ ಮತ್ತಷ್ಟು ರಮಣೀಯವಾಗಿ ಕಾಣಿಸುತ್ತದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ನೂರಾರು ವರ್ಷಗಳ ಇತಿಹಾಸ ಇರುವ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಕಲ್ಯಾಣಿ ಇತ್ತು. ಸುಮಾರು ದಶಕಗಳಿಂದ ಬಳಸದೇ ಇದ್ದ ಪರಿಣಾಮ ಗಿಡಗಳು ಬೆಳೆದು ಕಲ್ಯಾಣಿಯೇ ಕಾಣಿಸಿದ ರೀತಿ ಇತ್ತು. ಜಲಶಕ್ತಿ ಅಭಿಯಾನದ ಮುಖಾಂತರ ಕಲ್ಯಾಣಿ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಯೋಜನೆ ರೂಪಿಸಿ ನರೇಗಾ ಮೂಲಕ ಅನುಷ್ಠಾನ ಮಾಡಲಾಗಿತ್ತು.
ರಾಜ್ಯ ಸರ್ಕಾರದ ಜಲಶಕ್ತಿ ಅಭಿಯಾನದ ಮೂಲಕ ಕೆರೆ, ಕಲ್ಯಾಣಿ, ಪುಷ್ಕರಣಿ, ಗೋಕಟ್ಟೆಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಿ ರಾಜ್ಯಾದ್ಯಂತ ಅನುಷ್ಠಾನ ಮಾಡಲಾಗುತ್ತಿತ್ತು. ಶಿವಮೊಗ್ಗದಲ್ಲಿ ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಕಲ್ಯಾಣಿ ಪುನಶ್ಚೇತನಕ್ಕೆ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ನರೇಗಾ ಯೋಜನೆಯಡಿ ಕಲ್ಯಾಣಿ ಪುನಶ್ಚೇತನ ಕಾರ್ಯ 5 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡು 318 ಮಾನವ ದಿನಗಳ ಸಹಯೋಗದಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿತು. ಮಳೆಗಾಲದ ಅವಧಿಯಲ್ಲಿ ನೀರು ಕಲ್ಯಾಣಿ ಭರ್ತಿಯಾದ ಸಂದರ್ಭದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಪ್ರಸ್ತುತ ನೀರಿನ ಪ್ರಮಾಣ ಮೆಟ್ಟಿಲು ಹಂತದಲ್ಲಿದೆ.
ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ತುಂಬಾ ವರ್ಷಗಳ ಕಾಲ ಬಳಸದೇ ಗಿಡಗಳು ಬೆಳೆದು ಕಲ್ಯಾಣಿ ಕಾಣಿಸದ ರೀತಿಯಲ್ಲಿ ಇತ್ತು. ಆರಂಭದಲ್ಲಿ 21 ಮೆಟ್ಟಿಲು ಇರಬಹುದು ಅಷ್ಟೇ ಅಂದುಕೊಂಡಿದ್ದೇವು. ಪುನಶ್ಚೇತನ ಕಾರ್ಯ ವೇಳೆ 21 ಮೆಟ್ಟಿಲುಗಳ ಬಳಿಕ ಮೂರು ಅಡಿ ಸುತ್ತಳತೆಯ 30 ಅಡಿಗೂ ಅಧಿಕ ಆಳದ ಬಾವಿ ಸಹ ಇತ್ತು. ಎಲ್ಲರ ಸಹಕಾರದಿಂದ ಪುನಶ್ಚೇತನ ಕಾರ್ಯ ಪೂರ್ಣಗೊಂಡಿದೆ. ಮಳೆಗಾಲದಲ್ಲಿ ಕಲ್ಯಾಣಿಯು ಸುತ್ತಮುತ್ತ ಹಸಿರಿನಿಂದ ಕೂಡಿ ಅದ್ಭುತವಾಗಿ ಕಾಣಿಸುತ್ತದೆ. | ಎಸ್.ಹಾಲೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಿಳ್ಳಂಗೆರೆ
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu