ಮನೆ ಮನೆಗಳಲ್ಲಿ ಪರಿಸರ ಜಾಗೃತಿ ಅಗತ್ಯ
ಶಿವಮೊಗ್ಗ | 5 ಜೂನ್ 2023 | ಡಿಜಿ ಮಲೆನಾಡು.ಕಾಂ
ಪರಿಸರ ಸಂರಕ್ಷಣೆ ಕಾರ್ಯ ನಮ್ಮೆಲ್ಲರ ಕರ್ತವ್ಯ ಆಗಿದ್ದು, ಮನೆ ಮನೆಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಉತ್ತಮ ಪರಿಸರ ನಿರ್ವಹಣೆ ನಮ್ಮ ಆದ್ಯತೆಯಾಗಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗದ ಎಲ್ಲ ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ರೋಟರಿ ಬಯೋ ಡೈವರ್ ಸಿಟಿ ಪಾರ್ಕನಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ ನಿರ್ವಹಣೆ, ಜೀವ ಸಂಕುಲದ ಸಂರಕ್ಷಣೆ, ಇಂಧನ ಉಳಿಸುವ, ಪ್ಲಾಸ್ಟಿಕ್ ಮರುಬಳಕೆ ಕುರಿತು ಕಾರ್ಯಾಗಾರ, ಪರಿಸರ ಜಾಥಾ ಮೂಲಕ ಜನ ಜಾಗೃತಿ ಮೂಡಿಸಬೇಕು. ಗಿಡ ನೆಡುವುದು ಪೋಟೋ ಗೋಸ್ಕರ ಆಗದೇ ನಿತ್ಯ ಜೀವನದ ಭಾಗವಾಗಬೇಕು ಎಂದು ತಿಳಿಸಿದರು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಗಿಡ, ಮರ, ಪ್ರಾಣಿ, ಪಕ್ಷಿಗಳಂತಹ ಜೀವ ವೈವಿಧ್ಯಗಳ ರಕ್ಷಣೆಗೆ ಬಧ್ದರಾಗಲು ಪ್ರೇರಣೆ ನೀಡುವಂತಾಗಬೇಕು. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಮಲೆನಾಡು ರೋಟರಿ ಕ್ಲಬ್ ಅಧ್ಯಕ್ಷೆ ಮಂಜುಳಾ, ರೋಟರಿ ಮಾಜಿ ಗವರ್ನರ್ ಚಂದ್ರಶೇಖರ, ಎಮ್.ಜಿ. ರಾಮಚಂದ್ರ ಮೂರ್ತಿ, ಪರಿಸರ ಪ್ರೇಮಿಗಳಾದ ಲಕ್ಷೀನಾರಾಯಣ ಕಾಶಿ, ಪ್ರಕಾಶ ಪ್ರಭು, ರೋಟರಿ ಬಯೋ ಡೈವರ್ಸಿಟಿ ಫಾರೆಸ್ಟ್ ರೂವಾರಿ ಉಮೇಶ್, ಅನಂತಮೂರ್ತಿ, ಮಂಜುನಾಥ, ರೋಟರಿ ಉತ್ತರದ ಸರ್ಜಾ ಜಗದೀಶ್, ರವೀಂದ್ರನಾಥ ಐತಾಳ, ಡಾ. ಗುಡದಪ್ಪ, ಸುನೀತಾ ಶ್ರೀಧರ್, ರವಿ ಕೋಟೋಜಿ ಮತ್ತು ಜಿ.ವಿಜಯಕುಮಾರ್, ಮಹೇಶ ಅಂಕದ್, ಕೆ.ಪಿ.ಶೆೆಟ್ಟಿ ಗುರುರಾಜ ಹಾಗೂ ಎಲ್ಲಾ ರೋಟರಿ ಅದ್ಯಕ್ಷರು, ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಇಂಡೋ ಕಿಡ್ಸ್ ಶಾಲೆ, ಜ್ಞಾನದೀಪ ಶಾಲೆ ಜಾವಳ್ಳಿಯ ಮಕ್ಕಳು ಗಿಡ ನೆಡುವ ಕೆಲಸದಲ್ಲಿ ಭಾಗಿಯಾಗಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu